
ಉದಯವಾಹಿನಿ ದೇವನಹಳ್ಳಿ : ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಎಸ್.ತೆಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಿ.ವೆಂಕಟೇಶ 7 ಮತಗಳನ್ನು ಪಡೆದರು ಹಾಗೂ ಪ್ರತಿಸ್ಪರ್ಧಿ ಸುರೇಶ್ 4 ಮತಗಳನ್ನು ಪಡೆದರು.7 ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಡಿ.ವೆಂಕಟೇಶ್ ಹಾ ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಚುನಾವಣಾಧಿಕಾರಿ ಶಿವಕುಮಾರ್ ತಿಳಿಸಿದರು.ನೂತನ ಅಧ್ಯಕ್ಷ ಡಿ.ವೆಂಕಟೇಶ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ. ಗುಣಮಟ್ಟದ ಹಾಲು ಸಂಗ್ರಹಿಸಲು ಹೆಚ್ಚಿನ ಕಾಳಜಿ ವಹಿಸಲಾಗುವುದು. ಹೈನುಗಾರರ ಹಿತ ಕಾಪಾಡಲು, ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಲಾಗುವುದು ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುತ್ತೇನೆ. ಅವ್ಯವಹಾರಕ್ಕೆ ತಡೆ, ಲಾಭ ಗಳಿಸುವ ಮೂಲಕ ಲಾಭವನ್ನು ಉತ್ಪಾದಕರಿಗೆ ಹಂಚುವ ಪ್ರಾಮಾಣಿಕ ಪ್ರಯತ್ನ ನನ್ನ ಗುರಿಯಾಗಿದೆ’ ಎಂದು ತಿಳಿಸಿದರು.ಜಿಪಂಮಾಜಿ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ ಹೈನೋದ್ಯಮದಲ್ಲಿ ಮಹಿಳೆಯರದೇ ಹೆಚ್ಚಿನ ಶ್ರಮವಿದೆ. ಅವರಿಗೆ ನ್ಯಾಯ ಒದಗಿಸುವ ಮೂಲಕ ಸಂಘವನ್ನು ಬಲಿಷ್ಠವಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ. ನನ್ನ ಆಯ್ಕೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ’ ಎಂದು ಹೇಳಿದರು. ಪಕ್ಷ ಭೇದ ಮರೆತು ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿ, ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಸಂಘವನ್ನು ಪ್ರಗತಿ ಪಥದಲ್ಲಿ ಮುನ್ನೆಡಸಬೇಕು ಎಂದರು. ಈ ಸಂಧರ್ಭದಲ್ಲಿ ಖಾಧಿಬೋರ್ಡ್ ಅಧ್ಯಕ್ಷ ಮಾರೇಗೌಡ,ಚನ್ನರಾಯಪಟ್ಟಣ ಅಶ್ವತ್ಥಪ್ಪ,ಯಲಿಯೂರು ಈರಣ್ಣ,ಗೋಕರೆ ಗೋಪಾಲ್,ಎಂಪಿಸಿಎಸ್ ಮಂಜುನಾಥ್,ಶಂಕರ್,ಹರೀಶ್,ಟಿ.ಜಿ.ವೆಂ ಕಟೇಶ್ ಮೂರ್ತಿ,ಮಂಜುಳ,ಸೋಣ್ಣೇಗೌಡ,ಲಕ್ಷ್ಮೀ ನಾರಾಯಣ,ರಮೇಶ್,ಅಗ್ರಹಾರ ಸುರೇಶ್ ಮತ್ತಿತರರು ಇದ್ದರು.
