ಉದಯವಾಹಿನಿ, ಶಿಡ್ಲಘಟ್ಟ: ಮಣಿಪುರದಲ್ಲಿ ಶಾಂತಿ ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರೀತಿಯ ಪ್ರಯತ್ನಗಳು ನಡೆಸುತ್ತಿದ್ದು ಮಣಿಪುರದ ಹಿಂದಿನ ಸ್ಥಿತಿಗೆ ವಿಪಕ್ಷಗಳ ನಾಯಕರ ಅಸಹಕಾರ ಕಾರಣವಾಗಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಆರೋಪಿಸಿದರು.ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳಿಗೆ, ಮಯೂರ ವೃತ್ತದ ಬಿಜೆಪಿ ಸೇವಾಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಣಿಪುರದಲ್ಲಿ ಶಾಂತಿ ನೆಲೆಯುವಂತೆ ಮೋದಿ ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದ್ದಾರೆ ಆದರೆ ವಿಪಕ್ಷಗಳಿಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಗ್ಯಾರೆಂಟಿ ಜಾರಿಗಳಿಗೆ ಹಣವನ್ನು ಹೊಂದಿಸಲು ಸಿಎಂ ಸಿದ್ದರಾಮಯ್ಯ ಅವರು ಹೆಣಗಾಡುತ್ತಿದ್ದಾರೆ. ಇದರಿಂದಾಗಿ ಬೇರೆ ಯಾವುದೇ ಅಭಿವೃದ್ಧಿಗಳು ಆಗುತ್ತಿಲ್ಲ. ಸಾಕಷ್ಟು ಇಲಾಖೆಗಳಲ್ಲಿ ನೌಕರರಿಗೂ ಇನ್ನೂ ವೇತನದ ಹಣ ಬಿಡುಗಡೆಯಾಗಿಲ್ಲ ಎಂದು ಆಪಾದಿಸಿದರು. ಜಾತಿ ಜಾತಿ ನಡುವೆ ಬೆಂಕಿ ಇಡುವುದು ಹಾರಿಸುವುದು ಕಾಂಗ್ರೆಸ್ ಗೆ ಹೊಸದೇನಲ್ಲ. ಹಾಗೆಯೇ ಬಿಬಿಎಂಪಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯ ಹಿಂದೆ ಅನುಮಾನಗಳು ಕಾಡುತ್ತಿವೆ. ಗುತ್ತಿಗೆದಾರರಿಂದ ಕಮಿಷನ್ ಹಣ ಕೇಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ನಂಬಿರುವ ಅಜ್ಜಯ್ಯನ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ ಎಂದು ಸವಾಲೆಸೆದರು.
SDPI ಸಂಘಟನೆಯನ್ನು ಬ್ಯಾನ್ ಮಾಡಿ ಈ ದೇಶವನ್ನು ಉಳಿಸುವುದು ನಮ್ಮ ಕರ್ತವ್ಯ. ಇಂತಹ ಸಂಘಟನೆಗಳಿಗೆ ಬೆಂಬಲಿಸುವ ವ್ಯಕ್ತಿಗಳನ್ನು ಡಿಜೆ ಪ್ರಕರಣ ಮುಂದೆ ಇಟ್ಟಿಕೊಂಡು ತನ್ವಿರ್ ಸೇಠ್ ವಿರುದ್ಧ ಗುಡುಗಿದರು.ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮೂರು ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಬಿಜೆಪಿ ಬೆಂಬಲತರು ಅಧಿಕಾರ ಹಿಡಿದಿದ್ದಾರೆ ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ಮಂಡಲಾಧ್ಯಕ್ಷ ಸುರೇಂದ್ರಗೌಡ,ಆಂಜನೇಯಗೌಡ,ಜಿಲ್ಲಾ ವಕ್ತಾರ ರಮೇಶ್ ಬಾಯಿರಿ , ಕನಕಪ್ರಸಾದ್,ಸಾದಲಿ ವೆಂಕಟೇಶ್,ದಿಬ್ಬೂರಹಳ್ಳಿ ರಾಜಣ್ಣ,ಮಳಮಾಚನಹಳ್ಳಿ ರವಿ,ಡಾ.ಸತ್ಯನಾರಾಯಣ, ಚೀಮಂಗಲ ಪುಟ್ಟಣ್ಣ,ನಗರಸಭೆ ಸದಸ್ಯ ನಾರಾಯಣಸ್ವಾಮಿ, ತ್ರಿವೇಣಿ,ಆನಂದಗೌಡ, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!