
ಉದಯವಾಹಿನಿ,ದೇವದುರ್ಗ : ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ ಶಾಶ್ವತ ಆಯೋಗ ರಚನೆ ಹಾಗೂ 2016-17ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯ ಭೂ ಒಡೆತನ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಹಾಗೂ ಮಾಲೀಕರಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ಮತ್ತು ರಾಯಚೂರು ಜಿಲ್ಲೆಯಲ್ಲಿ ವಾಸಿಸುವ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣು ಪ್ರಕಾಶ್ ಪಾಟೀಲ್ ಗೆ ಬುಡ್ಗ ಜಂಗಮ್ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.
ದೇಶಕ್ಕೆ ಸ್ವತಂತ್ರ ಬಂದು 77 ವರ್ಷ ಗತಿಸಿದರು ಕೂಡ ಇನ್ನು ನಿಜಕ್ಕೂ ನಿಕೃಷ್ಟವಾಗಿ ಸ್ಥಿತಿಯಲ್ಲಿ ಬದುಕುತ್ತಿರುವ ಶೋಷಿತ ಅಲೆಮಾರಿ ಸಮುದಾಯಗಳಿಗೆ ಬದುಕಲು ಸೂರಿಲ್ಲದೆ ಊರಿಂದ ಊರಿಗೆ ವಲಸೆ ಹೋಗುತ್ತಿದ್ದು, ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರಾಗಿರುದ್ದು ಸರ್ಕಾರದ ಸೌಲಭ್ಯ ಪಡೆಯಲು ನಮ್ಮನ್ನು ಸಮುದಾಯಗಳಂತೆ ಗುರುತಿಸುವಂತಹ ಸಾಮಾನ್ಯ ಜಾತಿ ಪ್ರಮಾಣ ಪತ್ರವಿಲ್ಲದೆ ಎಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಬಿಕ್ಷೆ ಬೇಡುತ್ತಾ ಟೆಂಟ್‌ಗಳಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದೇವೆ ಎಂದು ಸಚಿವರ ಮುಂದೆ ಅಳಲನ್ನು ತಂದುಕೊಂಡರು.
ಈಗಲಾದರು ಸರ್ಕಾರ ನಮ್ಮ ಸ್ಥಿತಿಯನ್ನು ಮನಗಂಡು ನಿಕೃಷ್ಟವಾಗಿ ಸ್ಥಿತಿಯಲ್ಲಿ ಬದುಕುತ್ತಿರುವ ಶೋಷಿತ ಅಲೆಮಾರಿ ಸಮುದಾಯಗಳನ್ನು ಮೇಲತ್ತಲು ನಮಗೆ ಶಾಶ್ವತವಾದ ಪರಿಹಾರ ನೀಡಬೇಕು. ಶಾಶ್ವತ ಅಲೆಮಾರಿ ಆಯೋಗ ರಚಿಸಿ ಸಂಪೂರ್ಣವಾಗಿ ಅಧ್ಯಯನ ಮಾಡಿದಾಗ ಏನಾದರೂ ಪರಿಹಾರ ದೊರಕಿತೆಂಬ ಆಸೆಯಿಂದ ನಮೃತೆಯಿಂದ ತಮ್ಮನ್ನ ಬೇಡಿಕೊಳ್ಳುತ್ತಿದ್ದೆವೆ ಎಂದು ಒತ್ತಾಯಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬುಡ್ಗ ಜಂಗಮ ( ಪ.ಜಾ ) ಹೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ರಾಜ್ಯ ಮುಖಂಡ ಆಂಜನೇಯ ಹಿಪ್ಪೆಯವರು, ಜಿಲ್ಲಾ ಮುಖಂಡರಾದ ಮಹಾಂತೇಶ್ ಸಂಕಲ್, ಹನುಮೇಶ್ ಮೋತಿ ಮುಂತಾದವರು ಇದ್ದರು….
