ಉದಯವಾಹಿನಿ, ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‍ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಮೂವರು ವಿದ್ಯಾರ್ಥಿನಿಯರಿಗೆ 10,000 ರೂ. ದಂಡ ವಿಧಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ, ಶಿಪ್ರಾ ಹಾಸ್ಟೆಲ್ ವಾರ್ಡನ್ ಜೊತೆ ವಿದ್ಯಾರ್ಥಿನಿಯರು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಆದರೆ ಕಾಲೇಜು ಆಡಳಿತ ಮಂಡಳಿಯಿಂದ ದಂಡ ವಿಧಿಸಲಾಗಿದೆ. ಇದಕ್ಕೆ ವಿದ್ಯಾರ್ಥಿ ಸಂಘಟನೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿವಿ ಆಡಳಿತವು ಏಪ್ರಿಲ್ ತಿಂಗಳಿನಲ್ಲಿ ರಾತ್ರಿ 1 ರಿಂದ 3.30 ರವರೆಗೆ ನಡೆಸಿದ ತನಿಖೆಯೇ ತಪ್ಪಿನಿಂದ ಕೂಡಿದೆ, ಹೀಗಾಗಿ ವಿದ್ಯಾರ್ಥಿನಿಯ ಮೇಲೆ ಹಾಕಿರುವ ದಂಡವನ್ನು ರದ್ದುಗೊಳಿಸಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.
ಏನಿದು ಘಟನೆ: ಏಪ್ರಿಲ್ ತಿಂಗಳಿನಲ್ಲಿ ಶಿಪ್ರಾ ಹಾಸ್ಟೆಲ್‍ನಲ್ಲಿ ವಾರ್ಡನ್ ತಪಾಸಣೆ ನಡೆಸಿರುತ್ತಾರೆ. ಆದರೆ ಯಾವುದೇ ಮಾಹಿತಿ ನೀಡದೇ ತಪಾಸಣೆ ನಡೆಸಿದ್ದಾರೆಂದು ಆ ದಿನ ವಿದ್ಯಾರ್ಥಿನಿಯರು ವಾರ್ಡ್‍ನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಹಾಸ್ಟೆಲ್ ವಾರ್ಡನ್ ಅವರನ್ನು ಪ್ರಶ್ನಿಸಿದ್ದರಿಂದ ಆ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿ ದಂಡ ವಿಧಿಸಿದೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮಾತನಾಡಿದ್ದು, ವಾರ್ಡನ್ ಏಪ್ರಿಲ್ ತಿಂಗಳಿನಲ್ಲಿ ರಾತ್ರಿ 1ರಿಂದ 3:30 ರವರೆಗೆ ನಡೆಸಿದ ತನಿಖೆಯೇ ಸರಿಯಾಗಿ ಇಲ್ಲ. ತಡರಾತ್ರಿ ತನಿಖೆ ನಡೆಸುವ ಅವಸರವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಿರುವುದು ತಪ್ಪು ಎಂದಿದ್ದಾರೆ.
