ಉದಯವಾಹಿನಿ,ಇಸ್ಲಾಮಾಬಾದ್: ಸೆರೆಮನೆಯಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಆಪ್ತ ಸಹಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ ಅವರನ್ನು ರಹಸ್ಯ ಕಾಯ್ದೆಯಡಿ ಬಂಧಿಸಲಾಗಿದೆ. ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಉಪಾಧ್ಯಕ್ಷರೂ ಆಗಿದ್ದ ಖುರೇಷಿ ಅವರನ್ನು ಬಂಧಿಸಿರುವ -ಫ್ರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ನಂತರ ಅವರನ್ನು ಎಫ್ಐಎ ಪ್ರಧಾನ ಕಚೇರಿಗೆ ಕರೆದೊಯ್ದಿದೆ.
ಖುರೇಷಿ ಅವರು ವಿದೇಶಾಂಗ ಸಚಿವರಾಗಿದ್ದಾಗ ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿ ವಿದೇಶಾಂಗ ಕಚೇರಿಗೆ ಕಳುಹಿಸಿದ್ದ ಅಧಿಕೃತ ಕೇಬಲ್‍ನ ರಹಸ್ಯವನ್ನು ಉಲ್ಲಂಸಿದ್ದಕ್ಕಾಗಿ ಅಧಿಕೃತ ರಹಸ್ಯಕಾಯಿದೆಯಡಿಯಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷ ಏಪ್ರಿಲ್‍ನಲ್ಲಿ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆದುಹಾಕಲು ವಿದೇಶಿ ಪಿತೂರಿ ಎಂಬುದಕ್ಕೆ ಪುರಾವೆಯಾಗಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರನ್ನು ಬಂಧಿಸಲಾಗಿದೆ. ಎಫ್ಐಎ ಖುರೇಷಿ ವಿರುದ್ಧ ದಾಖಲಿಸಿದ ಪ್ರಥಮ ಮಾಹಿತಿ ವರದಿಯುಈ ವಿಷಯವನ್ನುಉಲ್ಲೇಖಿಸುತ್ತದೆ ಮತ್ತುಅಧಿಕೃತ ರಹಸ್ಯಕಾಯಿದೆ ಸೆಕ್ಷನ್ 5, ಪಾಕಿಸ್ತಾನ ದಂಡ ಸಂಹಿತೆಯಸೆಕ್ಷನ್ 34 ಹಾಗೂ ಅಧಿಕೃತ ರಹಸ್ಯ ಕಾಯಿದೆ 1923 ರಸೆಕ್ಷನ್ 5 g ಅಡಿಯಲ್ಲಿ ಎಫ್ಐಆರ್ ದಾಖಲಿಸಿದ ಎರಡು ದಿನಗಳ ನಂತರ ಅವರ ಬಂಧನವಾಗಿದೆ.ಖುರೇಷಿ ಅವರ ಬಂಧನ ಅಕ್ರಮವಾಗಿದೆ ಎಂದು ಪಿಟಿಐ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
