ಉದಯವಾಹಿನಿ, ಗ್ವಾಲಿಯರ್: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಮುನ್ನೆಡೆಯುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದಾರೆ. ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಮುನ್ನೆಡೆಯುತ್ತಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ-೩ ಇಳಿದಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ. ಇಸ್ರೋದ ಮೂರನೇ ಚಂದ್ರನ ಅಂಗಳ ತಲುಪುವ ಮೂರನೇ ಪ್ರಯತ್ನ ಚಂದ್ರಯಾನ-೩ ರ ವಿಜಯದ ನಗೆ ಬೀರಿದೆ.ಇದಕ್ಕಾಗಿ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ೪೦ ದಿನಗಳ ಪ್ರಯಾಣದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-೩ ಯಶಸ್ವಿಯಾಗಿ ನಿನ್ನೆ ಚಂದ್ರನ ದಕ್ಷಿಣ ಧ್ರವದಲ್ಲಿ ಇಳಿದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಭಾರತ ಯಶಸ್ವಿಯಾಗಿದ್ದು, ರಷ್ಯಾದ ಲೂನಾರ್ -೨೫ ಅದೇ ಪ್ರದೇಶದಲ್ಲಿ ಪತನಗೊಂಡ ಕೆಲವು ದಿನಗಳ ನಂತರ ಭಾರತ ಚಂದ್ರನ ಅಂಗಳದಲ್ಲಿ ಸಾಧನೆ ಮರೆದಿದೆ ಎಂದಿದ್ದಾರೆ.
