ಉದಯವಾಹಿನಿ, ಚಿಂಚೋಳಿ: ಪುರಸಭೆ ವ್ಯಾಪ್ತಿಯ ವಾರ್ಡ ನಂ.18ರಲ್ಲಿ ಶುದ್ಧ ಕುಡಿಯುವ ನೀರು,ಚರಂಡಿ ವ್ಯವಸ್ಥೆ,ಕಸ ವಿಲೇವಾರಿ,ಕಾಲೋನಿಯ ರಸ್ತೆಗಳ ನಿರ್ಮಾಣ ಹೀಗೆ ಹತ್ತಾರು ಸಮಸ್ಯೆಗಳು ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕಾ ಅಧ್ಯಕ್ಷ ಸಚಿನ್ ಚವ್ಹಾಣ ಆಗ್ರಹಿಸಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿಯವರಿಗೆ ವಿವಿಧ ಬೇಡಿಕೆಗಳ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ಹಲವಾರು ಕಡೆ ಚರಂಡಿಗಳು ನಿರ್ಮಿಸಿಲ್ಲ,ಚರಂಡಿಗಳು ತುಂಬಿಕೊಂಡು ಗಬ್ಬು ವಾಸನೆ ಬರುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ.
ವಾರ್ಡ್ ನಂ.18ರಲ್ಲಿ ಸಿಸಿ ರಸ್ತೆ,ಚರಂಡಿ,ಕುಡಿಯುವ ನೀರಿನ ವ್ಯವಸ್ಥೆ,ಬೀದಿದ್ವೀಪ ಹೀಗೆ ಹತ್ತಾರು ಸಮಸ್ಯೆಗಳಿಂದ ಕಾಲೋನಿಯಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ,ಕಸ ವಿಲೇವಾರಿ ಮಾಡುವ ವಾಹನ ವಾರಕ್ಕೊಮ್ಮೆ ಬರುತ್ತಿದೆ ಜನರು ಕಸ ವಿಲೇವಾರಿ ಮಾಡುವುದು ಬಹಳಷ್ಟು ಕಷ್ಟಕರವಾಗಿದೆ ಇವೆಲ್ಲವೂ ಸಮಸ್ಯೆಗಳು ಒಂದು ತಿಂಗಳಲ್ಲಿ ಬಗೆಹರಿಸದಿದ್ದರೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರ ನೇತೃತ್ವದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.ಪ್ರಮುಖರಾದ ಹೀರಾ ಪವ್ಹಾರ,ಲಿಂಬಾಜೀ ಚವ್ಹಾಣ,ಅರುಣ ಪವ್ಹಾರ,ಮಹ್ಮುದ್ ಸಲಿಂ ಅನೇಕರಿದ್ದರು.

ಪುರಸಭೆಯ ವಾರ್ಡ್ ನಂ.18ರಲ್ಲಿ ನಗರೋತ್ಥಾಪನ ಹಂತ 4ರ ಯೋಜನೆಯಲ್ಲಿ 50ಲಕ್ಷ ರೂಪಾಯಿಯಲ್ಲಿ ಸಿಸಿ ರಸ್ತೆ,ಚರಂಡಿ ನಿರ್ಮಾಣ ವಿವಿಧ ಕಾಮಗಾರಿಗಳು ಕ್ರೀಯಾಯೋಜನೆ ಸಿದ್ದಪಡಿಸಿ ಟೆಂಡರ್ ಪ್ರಕ್ರಿಯೆ ಮುಗಿದಿದೆ.ರಸ್ತೆಗಳಲ್ಲಿ ಸಣ್ಣಪುಟ್ಟ ತೆಗ್ಗು ಗುಂಡಿಗಳು ಬಿದ್ದಿರುವುದು ಮರುಬು ಹಾಗೂ ಚಿಲಪಾ ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿದೆ,ನೂತನ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

:ಕಾಶಿನಾಥ ಧನ್ನಿ
ಪುರಸಭೆ ಮುಖ್ಯಾಧಿಕಾರಿ ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!