ಉದಯವಾಹಿನಿ, ಬೆಂಗಳೂರು: ಅರಸಿಕೆರೆ ತಾಲ್ಲೂಕಿನ ಹಿರಿಯ ಸಮಾಜ ಸೇವಕರು ಕೋಡು ಗೈದಾನಿಗಳಾಗಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಮುಖಂಡರಾಗಿದ್ದು ಸಮಾಜದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಕಳೆದ ಸುಮಾರು ವರ್ಷಗಳಿಂದಲೂ ಸಹ ನೆಡೆ ಸಿಕೊಂಡು ಬರುತ್ತಿರುವ ಜೆಪಿ ಜಯಣ್ಣ ರವರಿಗೆ ರಾಜ್ಯಮಟ್ಟದಲ್ಲಿ ಸರ್ಕಾರದ ವತಿಯಿಂದ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ತಾಲ್ಲೂಕಿನ ಹಲವಾರು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಅರಸೀಕೆರೆ ತಾಲೂಕಿನಾದ್ಯಂತ ಬಡವರು ಹಿಂದುಳಿದ ವರ್ಗದವರು ಹಲವಾರು ಸಮಸ್ಯೆಗಳಲ್ಲಿ ಎದುರಿಸುತ್ತಿರುವ ಸಂದರ್ಭದಲ್ಲಿ ಕಳೆದ ಸುಮಾರು ವರ್ಷಗಳಿಂದಲೂ ಸಹ ಸಹಾಯಕ್ಕೆ ನಿಂತವರು ಎಂದರೆ ಅವರೇ ಅರಸೀಕೆರೆಯ ಜೆಪಿ ಜಯಣ್ಣ ರಾಜಕಾರಣದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣಿಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು ಸಹ ಎಂದಿಗೂ ನನಗೆ ಅಧಿಕಾರ ಬೇಕು ಎಂದು ಕೇಳಿದವರಲ್ಲ ಹಿಂದುಳಿದ ವರ್ಗಗಳ ನಾಯಕರು ಮತ್ತು ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೊಂದಿಗೆ ತಮ್ಮ ಆತ್ಮೀಯತೆಯನ್ನು ಹೊಂದಿದ್ದರು ಸಹ ಇಂದಿಗೂ ಯಾವುದೇ ಅಧಿಕಾರಕ್ಕಾಗಿ ಕೈ ಚಾಚಿದವರಲ್ಲ ಯಾವುದೇ ಫಲಾಪೇಕ್ಷೆ ಇಲ್ಲದೆ ಕಳೆದ ಸುಮಾರು ವರ್ಷಗಳಿಂದಲೂ ಸಹ ಜನರೊಂದಿಗೆ ಜಾತ್ಯಾತೀತ ಮನೋಭಾವನೆಯನ್ನು ಹೊಂದಿ ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಬಂದಿರುವ ಜೆಪಿ ಜಯಣ್ಣನವರಿಗೆ ಸೂಕ್ತ ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ನೀಡಿದ್ದೆ ಆದಲ್ಲಿ ಬರುವ ಲೋಕಸಭಾ ಚುನಾವಣೆಗೆ ರಾಜ್ಯಮಟ್ಟದಲ್ಲಿಯೂ ಸಹ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವುದರಲ್ಲಿ ಎರಡನೇ ಮಾತಿಲ್ಲ ಆದ್ದರಿಂದ ಪಕ್ಷದ ರಾಜ್ಯ ಮಟ್ಟದ ಮುಖಂಡರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಜೆಪಿ ಜಯಣ್ಣನವರಿಗೆ ರಾಜ್ಯಮಟ್ಟದ ಸೂಕ್ತ ಸ್ಥಾನಮಾನ ನಿಗಮ ಮಂಡಳಿ ಅಧಿಕಾರ ನೀಡಬೇಕೆಂದು ತಾಲೂಕಿನ ಅಪಾರ ಜೆಪಿ ಜಯಣ್ಣ ಅವರ ಅಭಿಮಾನಿ ಬಂಧುಗಳು ಒತ್ತಾಯಿಸಿದ್ದಾರೆ
ಜೆಪಿ ಜಯಣ್ಣ ಪ್ರತಿಕ್ರಿಯೆ: ಕಳೆದು ಸುಮಾರು ವರ್ಷಗಳಿಂದ ರಾಜಕಾರಣಿಗಳು ಮಂತ್ರಿಗಳು ಮಾಜಿ ಸಚಿವರು ಮುಖ್ಯಮಂತ್ರಿಗಳ ಜೊತೆ ಸ್ನೇಹ ಅಭಿಮಾನವನ್ನು ಹೊಂದಿದ್ದು ಅಧಿಕಾರಕ್ಕಾಗಿ ಯಾವತ್ತು ಕೇಳಿಕೊಳ್ಳಲಿಲ್ಲ ಆದರೆ ಈಗ ರಾಜ್ಯದ್ಯಂತ ಅಭಿಮಾನಿಗಳು ವಿಶೇಷವಾಗಿ ಅರಸೀಕೆರೆ ತಾಲೂಕಿನ ನಮ್ಮ ಅಭಿಮಾನಿಗಳು ತಾವು ರಾಜಕೀಯದಲ್ಲಿ ಸ್ಥಾನಮಾನ ಪಡೆದುಕೊಳ್ಳಬೇಕೆಂದು ಒತ್ತಡ ತರುತ್ತಿದ್ದು ಇದನ್ನು ಜನಪ್ರಿಯ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೇರಿದಂತೆ ಪಕ್ಷದ ಹಿರಿಯರು ನಮ್ಮನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದೆ ಆದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಜೆಪಿ ಜಯಣ್ಣ ತಿಳಿಸಿದ್ದಾರೆ
