ಉದಯವಾಹಿನಿ, ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆದಿದ್ದ ಕಂದಾಯ ಭೂಮಿ ಹಗರಣ ಪ್ರಕರಣ
ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನ ಅಧಿಕಾರಿ ಉಮೇಶ್ ಬಂಧನ ವಾಗಿದ್ದು
ತಡ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿರುವ ಕಡೂರು ಠಾಣೆಯ ಪೊಲೀಸರು
ಈ ಹಿಂದೆ ಕಡೂರು ತಾಲೂಕಿನ ತಹಶೀಲ್ದಾರ್ ಆಗಿದ್ದ ಉಮೇಶ್
ಕಂದಾಯ ಭೂಮಿ ಪರಭಾರೆ ಹಗರಣದಲ್ಲಿ ಭಾಗಿ ಹಿನ್ನೆಲೆ ದಾಖಲಾಗಿದ್ದ ಪ್ರಕರಣ
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಮೇಶ್ ವಿರುದ್ಧ ದೂರು ದಾಖಲು
ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಜಿಲ್ಲಾಡಳಿತ
15 ತಹಶೀಲ್ದಾರ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದ ಸರ್ಕಾರ
ಕಡೂರು ತಾಲೂಕಿನಲ್ಲಿ ನಡೆದ ಅಕ್ರಮದ ಬಗ್ಗೆ ವರದಿ ಸಲ್ಲಿಸಿರುವ ತನಿಖಾ ತಂಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮದ ತನಿಖೆಗೆ ಸೂಚನೆ ನೀಡಿದ್ದ ಸರ್ಕಾರ
ಉಮೇಶ್ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು
ಕಡೂರು ತಾಲೂಕಿನಲ್ಲೇ ಮೂರು ಸಾವಿರ ಎಕರೆ ಕಂದಾಯ ಭೂಮಿ ಗುಳುಂ
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಪ್ರಭಾವಿಗಳಿಗೆ ಪರಭಾರೆ
ಕಡೂರು ತಹಶಿಲ್ದಾರ್ ಆಗಿದ್ದ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಕಂದಾಯ ಭೂಮಿ ಪರಭಾರೆ ಮಾಡಿದ್ದರು ಎನ್ನಲಾಗಿದೆ
