ಉದಯವಾಹಿನಿ, ನವದೆಹಲಿ: ದೇಶದಲ್ಲಿ ಖನಿಜ ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಕಾಣುತ್ತಿದ್ದು ವರ್ಷದ ಅವಧಿಯಲ್ಲಿ ಶೇಕಡಾ 7.6 ರಷ್ಟು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ.
ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯದ ಖನಿಜ ಉತ್ಪಾದನೆಯ ಸೂಚ್ಯಂಕದ ವರದಿಯ ಪ್ರಕಾರ 2023 ರ ಜೂನ್ ತಿಂಗಳಿಗಳಲ್ಲಿ ಖನಿಜ ಉತ್ಪಾದನೆ 122.3 ರಷ್ಟಿದೆ, ಇದು 2022ರ ಜೂನ್ ತಿಂಗಳಿಗೆ ಹೋಲಿಸಿದರೆ ಹೋಲಿಸಿದರೆ ಶೇಕಡಾ 7.6 ರಷ್ಟು ಹೆಚ್ಚಾಗಿದೆ” ಎಂದು ತಿಳಿಸಲಾಗಿದೆ.
2023-24ರ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಸಂಚಿತ ಬೆಳವಣಿಗೆ ಹಿಂದಿನ ವರ್ಷದ ಅನುಗುಣವಾದ ಅವಧಿಯಲ್ಲಿ ಶೇಕಡಾ 6.3 ರಷ್ಟು ಇತ್ತು. ಕಳೆದ ತಿಂಗಳಿಗೆ ಹೋಲಿಸಿದರೆ ಹೆಚ್ಚು ಪ್ರಗತಿ ಕಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಕಲ್ಲಿದ್ದಲು ಉತ್ಪಾದನೆ 739 ಲಕ್ಷ ಟನ್, ಲಿಗ್ನೈಟ್ 33 ಲಕ್ಷ ಟನ್, ನೈಸರ್ಗಿಕ ಅನಿಲ 2845 ದಶಲಕ್ಷ ಕ್ಯೂಬಿಕ್ ಮೀಟರ್, ಪೆಟ್ರೋಲಿಯಂ 24 ಲಕ್ಷ ಟನ್, ಬಾಕ್ಸೈಟ್ 1991 ಸಾವಿರ ಟನ್, ಕ್ರೋಮೈಟ್ 399 ಸಾವಿರ ಟನ್, ತಾಮ್ರ 9 ಸಾವಿರ ಟನ್, ಚಿನ್ನ 101 ಕೆಜಿ, ಕಬ್ಬಿಣದ ಅದಿರು 229 ಲಕ್ಷ ಟನ್, ಸೀಸದ ಅದಿರು 33 ಸಾವಿರ ಟನ್, ಮ್ಯಾಂಗನೀಸ್ ಅದಿರು 303 ಸಾವಿರ ಟನ್, ಜಿಂಕ್ ಕಾಂಕ್ 140 ಸಾವಿರ ಟನ್, ಸುಣ್ಣದ ಕಲ್ಲು 373 ಲಕ್ಷ ಟನ್, ಫಾಸ್ಫೊರೈಟ್ 126 ಸಾವಿರ ಟನ್ ಮತ್ತು ಮ್ಯಾಗ್ನೆಸ್ಟನ್ 1 ನಷ್ಟು ಉತ್ಪಾದನೆಯಾಗಿದೆ ಎಂದು ತಿಳಿಸಿದೆ. 2022ರ ಜೂನ್ ಮತ್ತು 2023ರ ಜೂನ್ ತಿಂಗಳಲ್ಲಿ ಧನಾತ್ಮಕ ಬೆಳವಣಿಗೆ ಕಂಡಿದೆ.
