ಉದಯವಾಹಿನಿ, ಸಿರುಗುಪ್ಪ : ತಾಲೂಕಿನ ರಾರಾವಿ ಗ್ರಾಮದ ಆದೋನಿಯ ರಸ್ತೆಯ ಯಲ್ಲಮ್ಮನ ಹಳ್ಳ ಹತ್ತಿರ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಆಟೋ ಮೇಲೆ ದಾಳಿ ನಡೆಸಿದ ಪೋಲೀಸರು ೧೨ ರಟ್ಟಿನ ಬಾಕ್ಸ್ಗಳು, ಪ್ಲಾಸ್ಟಿಕ ಚೀಲದಲ್ಲಿ ೯೦ಎಮ್.ಎಲ್‌ನ ೨೮೩ ಮದ್ಯದ ಪೌಚ್‌ಗಳ ಒಟ್ಟು ೧೨೯ಲೀ ಮದ್ಯ ಜಪ್ತಿಪಡಿಸಿಕೊಂಡಿದ್ದಾಗಿ ೫೭೫೪೩ರೂ ಬೆಲೆ ಬಾಳುವ ಮದ್ಯವನ್ನು ವಶಪಡಿಸಿಕೊಂಡಿರುವುದಾಗಿ ಪಿ.ಎಸ್.ಐ ತಿಮ್ಮಣ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜೀತ್ ಬಂಡಾರು, ಹೆಚ್ಚುವರಿ ಪೋಲೀಸ್ ಅಧೀಕ್ಷಕ ನಟರಾಜ, ಸಿರುಗುಪ್ಪ ಉಪವಿಭಾಗ ಡಿವೈಎಸ್‌ಪಿ ವೆಂಕಟೇಶ್ ವೃತ್ತ ನಿರೀಕ್ಷಕ ಸುಂದ್ರೇಶ್ ಹೊಳೆಣ್ಣನವರ್ ಅವರ ಮಾರ್ಗದರ್ಶನಲ್ಲಿ ಠಾಣೆಯ ತನಿಖೆ ಪಿ.ಎಸ್.ಐ ಹೊನ್ನಪ್ಪ ಅವರು ಸಿಬ್ಬಂದಿಗಳಾದ ಎ.ಎಸ್.ಐ ಸೂರ್ಯನಾರಾಯಣ, ಹೆಚ್.ಸಿ. ಚಿನ್ನಪ್ಪ, ಪಿ.ಸಿ. ಎ.ಬಸವರಾಜ, ವಿಜಯ ನಿಂಗಣ್ಣನವರ್, ಯಶವಂತ್ ತಂಡದೊAದಿಗೆ ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆಂದು ಇಲಾಖೆಯಿಂದ ಮಾಹಿತಿ ತಿಳಿದು ಬಂದಿದೆ.
ದಾಳಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿನ ಸಿಬ್ಬಂದಿಗಳನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜೀತ್ ಬಂಡಾರು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ಸಿಪಿಐ ಸುಂದ್ರೇಶ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!