ಉದಯವಾಹಿನಿ, ಅಂಟಾನಾನರಿವೊ: ಮಗಾಸ್ಕರ್‌ನ ರಾಜಧಾನಿ ಅಂಟಾನಾನರಿವೊದ ಕ್ರೀಡಾಂಗಣದಲ್ಲಿ ಶುಕ್ರವಾರ ಕಿಕ್ಕಿರಿದು ಸೇರಿದ್ದ ಜನಸಂದಣಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಜನರು ಮೃತಪಟ್ಟಿದ್ದಾರೆ ಎಂದು ದೇಶದ ಪ್ರಧಾನಿ ಕ್ರಿಶ್ಚಿಯನ್ ಸೇ ತಿಳಿಸಿದ್ದಾರೆ.
ಘಟನೆಯಲ್ಲಿ ಸುಮಾರು 80 ಮಂದಿ ಗಾಯಗೊಂಡಿದ್ದಾರೆ ಎಂದು ಆಂಟನಾನರಿವೋ ಆಸ್ಪತ್ರೆಯಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಇಂಡಿಯನ್ ಓಷನ್ ಐಲ್ಯಾಂಡ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 50 ಸಾವಿರ ಪ್ರೇಕ್ಷಕರು ಆಗಮಿಸಿದ್ದ ಬರಿಯಾ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಕಾಲ್ತುಳಿತ ಸಂಭವಿಸಿದೆ. ಜನರ ತಳ್ಳಾಟದಿಂದ ಪ್ರವೇಶದ್ವಾರದಲ್ಲಿ ಸಾವು-ನೋವು ಸಂಭವಿಸಿವೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಡಗಾಸ್ಕರ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!