ಉದಯವಾಹಿನಿ, ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಶುಭಮನ್ ಗಿಲ್ ಅವರು ಯೋ ಯೋ ಫಿಟ್‌ನೆಸ್ ಟೆಸ್ಟ್‌ನಲ್ಲಿ ಅತಿಹೆಚ್ಚು ಅಂಕ ಪಡೆದು ಗಮನ ಸೆಳೆದರು. ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರು ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ವಿವಿಧ ರೀತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಿದ್ದಾರೆ.ಶುಕ್ರವಾರ ಯೋ ಯೋ ಟೆಸ್ಟ್ ಎದುರಿಸಿದ ಗಿಲ್ ಅವರು 18.7 ಅಂಕಗಳನ್ನು ಗಳಿಸಿದರು ಎಂದು ಮೂಲಗಳು ಹೇಳಿವೆ. ಗುರುವಾರ ಈ ಪರೀಕ್ಷೆ ಎದುರಿಸಿದ್ದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ 17.2 ಅಂಕಗಳನ್ನು ಗಳಿಸಿದ್ದರು.ಇದುವರೆಗೆ ಯೋ ಯೋ ಟೆಸ್ಟ್ ಎದುರಿಸಿದ ಎಲ್ಲರೂ ಬಿಸಿಸಿಐ ನಿಗದಿ ಮಾಡಿರುವ ಅರ್ಹತಾ ಮಟ್ಟವನ್ನು (16.5 ಅಂಕ) ಮೀರಿನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಐವರು ಆಟಗಾರರಾದ ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ಧ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್.ರಾಹುಲ್ ಹೊರತುಪಡಿಸಿ ಏಷ್ಯಾ ಕಪ್‌ನಲ್ಲಿ ಆಡಲಿರುವ ಎಲ್ಲರೂ ಈ ಪರೀಕ್ಷೆಗೆ ಒಳಗಾಗಲಿದ್ದಾರೆ
