ಉದಯವಾಹಿನಿ, ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸಿಲಿಗುರಿ ಸಮೀಪದಲ್ಲಿರುವ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಆಗಸ್ಟ್ ೧೯ರ ಬೆಳಗ್ಗೆ ೫ ವರ್ಷದ ರಿಕಾ ಎಂಬ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಉದ್ಯಾವನದಲ್ಲಿ ಹುಲಿಗಳ ಸಂಖ್ಯೆ ೧೩ಕ್ಕೆ ಏರಿಕೆಯಾಗಿದೆ. ತಾಯಿ ಹುಲಿ ಮತ್ತು ಮರಿಗಳು ಆರೋಗ್ಯವಾಗಿದ್ದು, ಸಿಸಿಟಿವಿ ಕ್ಯಾಮರಾಗಳ ಮೂಲಕ ನಿಗಾ ಇಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ ಹುಲಿ ಮತ್ತು ಎಲ್ಲಾ ಮರಿಗಳು ಆರೋಗ್ಯವಾಗಿವೆ. ಸಿಸಿ ಕ್ಯಾಮರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅರಣ್ಯಾಧಿಕಾರಿಗಳು ಶೀಘ್ರದಲ್ಲೇ ಉದ್ಯಾನವನದಲ್ಲಿ ಸಿಂಹ ಸಫಾರಿ ಆರಂಭಿಸಲು ಮುಂದಾಗಿದ್ದಾರೆ ಎಂದು ಅರಣ್ಯ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್ ಮಾಹಿತಿ ನೀಡಿದರು.
೨೦೧೮ರಲ್ಲಿ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ರಿಕಾ ಸೇರಿದಂತೆ ಮೂರು ಹುಲಿಗಳು ಜನಿಸಿದ್ದವು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹುಲಿಗಳಿಗೆ ಹೆಸರಿಟ್ಟಿದ್ದರು. ಉದ್ಯಾನವನವು ೧೦೦ ಎಕರೆ ವಿಸ್ತೀರ್ಣ ಹೊಂದಿದೆ. ಪ್ರಸ್ತುತ, ಹುಲಿಗಳು, ಜಿಂಕೆಗಳು, ಘೇಂಡಾಮೃಗಗಳು, ಆನೆ, ಕರಡಿ, ವಿವಿಧ ಪಕ್ಷಿಗಳು ಮತ್ತು ಆಕರ್ಷಕ ಜಲಪಾತಗಳನ್ನು ಇಲ್ಲಿ ನೋಡಬಹುದಾಗಿದೆ.
