ಉದಯವಾಹಿನಿ, ದೇವದುರ್ಗ: ಕರೋನಾ ವೇಳೆಯಲ್ಲಿ ನಮ್ಮ ಜಾನಪದ ಪರಿಷತ್ತಿನಿಂದ ಕಡುಬಡವರಿಗೆ, ಸಂಕಷ್ಟದಲ್ಲಿರುವ ಜನರಿಗೆ ಸಹಾಯಸ್ತ ಮಾಡಿದ್ದು, ಅದರಂತೆ ನಮ್ಮ ಪರಿಷತ್ತಿನಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡಿದಂತೆ ಈ ಭಾರಿ ಕೂಡ ಪಠ್ಯದಲ್ಲಿರುವ ಎರಡು ಕಥೆಗಳನ್ನು, ನಾಟಕ ರೂಪದಲ್ಲಿ ಪ್ರದರ್ಶನ ಮಾಡುವದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗತ್ತದೆಂದು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಯಾಟಗಲ್ ಹೇಳಿದರು.
ಅವರು ಶುಕ್ರವಾರದಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಸಮಿತಿಯಿಂದ ಆಯೋಜಿಸಿದ ಬೆಪ್ಪು ತಕ್ಕಡಿ ಬೋಳೆಶಂಕರ ಹಾಗೂ ಕೃಷ್ಣೆಗೌಡನ ಆನೆ ಎಂಬ ಎರಡು ನಾಟಕಗಳ ಪ್ರದರ್ಶನವನ್ನು ಪಟ್ಟಣದ ಖೇಣೇದ್ ಪಂಕ್ಷನ ಹಾಲ್ ನಡೆದ ವೇಳೆ ಪ್ರಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಕೇಳುವದಕ್ಕಿಂದ ನೋಡಿ ಅಭ್ಯಾಸ ಮಾಡಿದರೆ ನೆನಪಿನ ಶಕ್ತಿಯಲ್ಲಿ ಉಳಿಯುತ್ತಿದ್ದು, ವಿದ್ಯಾರ್ಥಿಗಳು ಕೇವಲ ಮೋಬೇಲ್‍ಗಳಿಗೆ ಮಾರು ಹೊಗದೇ ಇಂತಹ ರಂಗ ಭೂಮಿಯಲ್ಲಿ ಮಾಡುವ ಸಾಮಾಜಿಕ ನಾಟಕಗಳನ್ನು, ಜನಪದ ಕಲೆಗಳನ್ನು ತಮ್ಮ ಜೀವದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪರಿಷತ್ತಿನಿಂದ ಹಲವಾರು ಸಾಮಾಜಿಕ ಕಳಕಳಿ ಮತ್ತು ಜನಪದ ಕಾರ್ಯಕ್ರಮಗಳು ಮಾಡಿದಂತೆ ಈ ಭಾರಿ ನಮ್ಮ ಪರಿಷತ್ತಿನಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಾಟಕ ಪ್ರದರ್ಶನ ಹಮ್ಮಿ ಕೊಳ್ಳಲಾಗಿದೆಂದು ಬಸವರಾಜ ಯಾಟಗಲ್ ಹೇಳಿದರು. ರಾಯಚೂರು ಜಿಲ್ಲೆಯ ಕಲಾವಿದರು ಮುಖಾ ಮುಖಿ ರಂಗ ಸಂಸ್ಥೆಯ ನಿರ್ಮಲ ವೇಣುಗೋಪಾಲ ಇವರ ನೇತೃತ್ವದಲ್ಲಿ ಎರಡು ಪ್ರದರ್ಶನಗಳು ನಡೆದರೆ, ಸಭೆಯ ಅಧ್ಯಕ್ಷತೆಯನ್ನು ಭಾನುಪ್ರಕಾಶ ಖೇಣೇದ್, ಡಾ. ಬಸವರಾಜ್ ರಡ್ಡಿ ಉದ್ಘಾಟಿಸಿದರೆ, ಕಸಾಪ ಮಾಜಿ ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ, ಡಾ. ಲೀಲಾವತಿ ಪಾಟೀಲ್, ಸುಭಾಶ್ಚಂದ್ರ ಪಾಟೀಲ್,ರಾಜಶೇಖರ ಗೂಗಲ್, ಹಿರಿಯ ಸಾಹಿತಿಗಳಾದ ಪ್ರಕಾಶ ಬುದ್ದಿನ್ನಿ, ಯಲ್ಲಪ್ಪ ಹಂದ್ರಾಳ ಸೇರಿದಂತೆ ಅನೇಕರಿದ್ದರು.
