ಉದಯವಾಹಿನಿ, ಆನೇಕಲ್ : ಸರ್ಜಾಪುರದ ರಾಯಲ್ ಗ್ರಾಂಡ್ ಪ್ಯಾಲೇಸ್ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀಮತಿ ಶ್ವೇತ ರಾಘವೇಂದ್ರ ಮತ್ತು ಎಸ್.ವಿ.ರಾಘವೇಂದ್ರ ರವರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವನ್ನು ಏರ್ಪಡಿಸಲಾಗಿತ್ತು.
ಇನ್ನು ತಿರುಮಲ ತಿರುಪತಿಯ ಶ್ರೀನಿವಾಸ ದೇವಾಲಯದ ಮಾದರಿಯಲ್ಲೇ ಭವ್ಯವಾದ ರಾಜಗೋಪುರ, ಗರ್ಭಗುಡಿಯ ಸೆಟ್ ನಿರ್ಮಿಸಲಾಗಿತ್ತು, ಈ ಒಂದು ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶ್ರೀವಾರಿ ಪೌಂಡೇಶನ್ ನ ಶ್ರೀ ವೆಂಕಟೇಶ ಮೂರ್ತಿ ಅವರ ತಂಡ ನೆರವೇರಿಸಿದರು.
ಈ ವೇಳೆ ಎಸ್.ವಿ ರಾಘವೇಂದ್ರ ರವರು ಮಾತನಾಡಿ, ಎಲ್ಲರೂ ಸಂತೋಷದಿಂದ ಜೀವನ ನಡೆಸಲಿ ಎಲ್ಲರಿಗೂ ಭಗವಂತನ ಕೃಪೆ ಸಿಗಲಿ ಎಂಬುವ ಉದ್ದೇಶದಿಂದ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಜೊತೆಗೆ ಶ್ರೀನಿವಾಸ ಕಲ್ಯಾಣ ಉತ್ಸವವನ್ನು ಕಣ್ಣು ತುಂಬಿಕೊಳ್ಳಲು ದೂರದ ತಿರುಮಲ ತಿರುಪತಿಗೆ ಹೋಗಬೇಕು ಮನಗೊಂಡು ಸರ್ಜಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ಇಲ್ಲಿಯೇ ಸ್ವಾಮಿಯ ದರ್ಶನ ಮಾಡಿಸುವ ಉದ್ದೇಶದಿಂದ ತಿರುಪತಿಯಲ್ಲಿ ನಡೆಯುವಂತಹ ರೀತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವನ್ನು ಆಯೋಜಿಸಲಾಗಿದೆ ಎಂದರು.
ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿಯ ಕೇಶವರೆಡ್ಡಿ, ಶ್ರೀನಿವಾಸ್, ಮಂಜುನಾಥ್ ರೆಡ್ಡಿ, ಪ್ರತಾಪ್, ಎಸ್.ಆರ್. ಅನಿಲ್, ಮತ್ತು ರಾಯಲ್ ಗ್ರಾಂಡ್ ಪ್ಯಾಲೇಸ್ ಮಾಲೀಕರಾದ ನರೇಂದ್ರ ಮತ್ತು ಜನಪ್ರತಿನಿಧಿಗಳು, ಗಣ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
