ಕೆಂಭಾವಿ: ಶಹಾಪುರ ಮತಕ್ಷೇತ್ರದ ಪ್ರತಿಯೊಂದು ಶಾಲೆಗಳಿಗೆ  ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ  ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೂಡ ಶಾಲೆಗಳ  ಅಭಿವೃದ್ಧಿಗೆ ಹೆಚ್ಚನ ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಹಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೨೦-೨೦೨೧ ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ನಿರ್ಮಿಸಿರುವ ೬೦.೩೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರೌಢ ಶಾಲೆಯ ನಾಲ್ಕು ಕೋಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ 

ಮುಖ್ಯಮಂತ್ರಗಳು ಮತ್ತೆ ಸುಳ್ಳು ಹೇಳಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಮೂರು ಸಾವಿರ ಕೋಟಿ ನಿಡುವ ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು ಇಲ್ಲಿಯವರೆಗೆ ಕೊಟ್ಟಿದ್ದು ಕೇವಲ ಅರ್ಧದಷ್ಟು ಮಾತ್ರ. ಅದರಲ್ಲೂ ೧೧೦೦ ಕೋಟಿಗೆ ಮಾತ್ರ ಕ್ರಿಯಾಯೋಜನೆ ಮಾಡಲಾಗಿದೆ. ಇದರಲ್ಲೂ ಹಲವಾರು ದೊಷಗಳಿವೆ ಎಂದು ಆರೋಪಿಸಿದರು. ಸಾಯಿನಗರ ಬಡಾವಣೆಯಲ್ಲಿ ನೀರಿನ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಹಣ ವದಗಿಸಿದ್ದು ಇಂದಿನಿಂದಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮರಿಗೌಡ ಹುಲಕಲ್, ಬಸನಗೌಡ ಹೊಸಮನಿ ಯಾಳಗಿ, ಮಹಾದೇವಪ್ಪ ಸಾಲಿಮನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಡಿ ಪಾಟೀಲ ವೇದಿಕೆ ಮೇಲಿದ್ದರು. ಶರಣಬಸವ (ಕಾಕಾ) ಡಿಗ್ಗಾವಿ, ಕೆಂಭಾವಿ 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಚಿಂಚೋಳಿ, ರಹೀಮಾನ ಪಟೇಲ್ ಯಲಗೋಡ, ಸೋಮಲಿಂಗಪ್ಪ ದೊಡ್ಡಮನಿ, ಮಲ್ಲಣ್ಣ ಹೆಗ್ಗೇರಿ, ಶಶಿಧರ ಮಾಲಿ ಪಾಟೀಲ, ಕೃಷ್ಣಯ್ಯ ಗುತ್ತೆದಾರ, ಶಾಂತಗೌಡ ಪೊಲೀಸ ಪಾಟೀಲ ಮಾಲಹಳ್ಳಿ, ಎಸ್‌ಕೆ ಕಲಿಂ, ಶಿವಶಂಕರ ಖಾನಾಪುರ, ಸಾಹೇಬಲಾಲ ಆಂದೇಲಿ, ದೇವಪ್ಪ ಮ್ಯಾಗೇರಿ, ರಾಮಸ್ವಾಮಿಭೋವಿ. ಪರಶುರಾಮ ಬಳಬಟ್ಟಿ. ರಾಯಪ್ಪ ಯತ್ನಾಳ, ಯಲ್ಲಪ್ಪ ಬಾವಿಮನಿ, ಶಾಲೆಯ ಮುಖ್ಯ ಗುರು ಕೆ ಆರ್ ಪಾಟೀಲ ಸೇರಿದಂತೆ ಇತರರಿದ್ದರು. ಬಸವರಾಜ ಬಂಟನೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಾಕ್ಸ್ : ಶಿಷ್ಟಾಚಾರ ಮರೆತ ಅಧಿಕಾರಿಗಳು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿ ೪ ಕೋಣೆಗಳನ್ನು ನಿರ್ಮಿತಿ ಕೇಂದ್ರದವರು ನಿರ್ಮಿಸಿದ್ದಾರೆ. ಅಧಿಕಾರಿಗಳು ಸಮಾರಂಭದ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸಹ  ಅಧಿಕಾರಿಗಳು ಮುದ್ರಿಸಿಲ್ಲ. ಈ ಸಮಾರಂಭದ ಕುರಿತು ಶಿಕ್ಷಣ 

ಇಲಾಖೆಯ ಮೇಲಾಧಿಕಾರಿಗಳಿಗೆ ಯಾವದೆ ಮಾಹಿತಿಯನ್ನು  ನೀಡಲಾಗಿಲ್ಲ. ಸಂಬಂಧಪಟ್ಟ ಜನ ಪ್ರತಿನಿಧಿಗಳಿಗೆ (ವಾರ್ಡ ಪುರಸಭೆ ಸದಸ್ಯರು ಸೇರಿದಂತೆ) ಯಾವ ಸಮಯಕ್ಕೆ  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂಬ ಮಾಹಿತಿಯನ್ನು 

ಸರಿಯಾಗಿ ತಿಳಿಸಿಲ್ಲ. ಶಿಷ್ಟಾಚಾರವನ್ನು ಉಲ್ಲಂಘಿಸಿ ಕಾರ್ಯಕ್ರಮವನ್ನು ಏರ್ಪಡಿಸಿದ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

error: Content is protected !!