
ಉದಯವಾಹನಿ, ನದೆಹೆಹಲಿ: ದೇಶದಲ್ಲಿ ಅಕ್ಕಿ ಬೆಲೆಗಳನ್ನು ನಿಯಂತ್ರಣದಲ್ಲಿರಲು ಹಾಗು ಒಟ್ಟಾರೆ ಹಣದುಬ್ಬರ ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಬೇಯಿಸಿದ ಅಕ್ಕಿಗೆ ಶೇ. 20ರಷ್ಟು ಸುಂಕ ವಿಧಿಸಿದೆ.ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕ ವಿಧಿಸಿದ ಕೇವಲ ಒಂದು ವಾರದ ನಂತರ ಕೇಂದ್ರ ಸರ್ಕಾರ ಇದೀಗ ಪಾರ್ಬಾಯಿಲ್ಡ್ ರೈಸ್ ಮೇಲೆ ಶೇಕಡ 20ರಷ್ಟು ರಫ್ತು ಸುಂಕ ವಿಧಿಸಿದೆ.ಬಾಸ್ಮತಿ ಅಕ್ಕಿಗೆ ಕನಿಷ್ಠ ರಫ್ತು ಬೆಲೆ ಸೂಚಿಸುವ ನಿರೀಕ್ಷೆಯಿದೆ, ಒಂದು ಟನ್‍ಗೆ 1,200 ಡಾಲರ್ ಅಥವಾ 99,000 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗಧಿ ಪಡಿಸಲಾಗಿದೆಈ ಎಲ್ಲಾ ಕ್ರಮಗಳು ಸಾಗಣೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಯಾವುದೇ ಅಕ್ಕಿ ಕೊರತೆ ನಿವಾರಿಸುವ ಉದ್ದೇಶ ಹೊಂದಿವೆ, ಆದರೂ ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಬೆಲೆಗಳಲ್ಲಿ ಕೇವಲ ಸ್ವಲ್ಪ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಹಿಂದೆ, ಒಡೆದ ಅಕ್ಕಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ಮತ್ತು ಗೋಧಿ ರಫ್ತುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈ ವರ್ಷ ಭತ್ತದ ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಮತ್ತು ಎಲ್ ನಿನೋ ಚಂಡಮಾರುತದ ಅಪಾಯದಿಂದಾಗಿ ದೇಶೀಯ ಉತ್ಪಾದನೆಯಲ್ಲಿ ಭತ್ತದ ಇಳುವರಿ ಕಡಿಮೆಯಾಗಿದೆ.
ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಪ್ರವಾಹ, ಪೂರ್ವ ರಾಜ್ಯಗಳಲ್ಲಿ ವಿಳಂಬವಾದ ಬಿತ್ತನೆ ಮತ್ತು ಕರ್ನಾಟಕದಲ್ಲಿ ಕಡಿಮೆ ಮಳೆಯು ಬೇಸಿಗೆಯ ಬೆಳೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.
