ಉದಯವಾಹನಿ, ತಿರುಪತಿ : ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸವಾಗಿದ್ದು. ಜೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಸಹ ನಟರಾಗಿ ಕಾಣಿಸಿಕೊಂಡಿರುವ ದೇವರ’ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ ಶೂಟಿಂಗ್ ಮಧ್ಯೆಯೇ ಬಿಡುವು ಮಾಡಿಕೊಂಡ ಜಾಹ್ನವಿ, ಇಂದು ಬೆಳಗ್ಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯವು ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಜಾಹ್ನವಿ ಮಾತ್ರವಲ್ಲದೇ ಆಕೆಯ ತಾಯಿ ಶ್ರೀದೇವಿ ಕೂಡ ವೆಂಕಟೇಶ್ವರನ ಕಟ್ಟಾ ಭಕ್ತರಾಗಿದ್ದಾರೆ.
ಇಂದು ಬೆಳಗ್ಗೆ ಸಾಂಪ್ರದಾಯಿಕ ಲ್ಯಾವೆಂಡರ್ ಸೀರೆಯನ್ನು ಧರಿಸಿ, ಮೇಕ್‌ಅಪ್ ಇಲ್ಲದೇ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಜಾಹ್ನವಿ ಅವರನ್ನ ಟಿಟಿಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಸ್ವಾಗತಿಸಿದರು. ದೇವಾಲಯದಲ್ಲಿ ಆಶೀರ್ವಾದ ಪಡೆದ ನಂತರ ನಟಿ ಜಾಹ್ನವಿ ದೇಗುಲದಿಂದ ನಿರ್ಗಮಿಸಿದರು.
