ಉದಯವಾಹಿನಿ ಸಿಂಧನೂರು: ರಾಜ್ಯಾದ್ಯಂತ ಕೆಲವು ಕಡೆ ಮಳೆ ಯಾಗಿದ್ದು ಮಾತೊಂದು ಕಡೆ ಮಳೆ ಇಲ್ಲದೆ ಬರಗಾಲ ಪೀಡಿತ ಪ್ರದೇಶವಾಗಿದ್ದು ಅದರಿಂದ ಸಿಂಧನೂರು ತಾಲ್ಲೂಕಿನ ಬಾದರ್ಲಿ ಗ್ರಾಮದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಮಳೆ ಮತ್ತು ಬೆಳೆ ಸರಿಯಾಗಿ ಆಗುತಿತ್ತು. ಆದರೆ ಸರಿಯಾಗಿ ಮಳೆ ಬಾರದೆ ಇರುವುದರಿಂದ ರೈತನು ಸಂಕಷ್ಟ ಎದುರಾಗಿದೆ.ಏಕೆಂದರೆ ಕಾಲ ಕಾಲಕ್ಕೆ ತಕ್ಕಂತೆ ಮಳೆ ಬಿದ್ದರೆ ರೈತರು ಮುಖದಲ್ಲಿ ಮಂದಹಾಸ ಮೂಡಿಸುತ್ತದೆ ಆದರೆ ಈ ಬಾರಿ ಮಳೆ ಬಾರದೆ ಇರುವುದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕ್ಷಣಿಕ ವಾಗಿದೆ ಎಂದರು. ಆದರಿಂದ ಬಾದರ್ಲಿ ಗ್ರಾಮಸ್ಥರಿಂದ ಮಳೆರಾಯನಗಾಗಿ ಪರುವು ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮಾತನಾಡಿದ ವೀರನಗೌಡ ಬಾದರ್ಲಿ ಅವರು ದೇವರ ಮೊರೆಹೋಗಿದ್ದಾರೆ ಎಂದರು ಗ್ರಾಮದ ಗುರು ಹಿರಿಯರ ಯುವಕರು ಎಲ್ಲಾರು ಸೋಮವಾರ ಬೆಳಗ್ಗೆ 5:00 ಯಿಂದ ಗ್ರಾಮದ ಹಿರೇ ಹಳ್ಳದಲ್ಲಿ ಗಂಗೆ ಪೂಜೆಯನ್ನು ಮಾಡಿ ಗ್ರಾಮದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಮಡಿಯಿಂದ ನೀರು ತಂದು ದೇವರಿಗೆ ನೀರು ಎರೆಯುವ ಮೂಲಕ ಮಳೆರಾಯನಿಗಾಗಿ ಪ್ರಾರ್ಥಿಸಲಾಯಿತು ಎಂದು ಹೇಳಿದರು.ಈ ಸಂದರ್ಭದಲ್ಲಿ ಯದ್ದಲದೊಡ್ಡಿಯ ಶ್ರೀಗಳಾದ ಮಹಾಲಿಂಗ ಮಹಾಸ್ವಾಮಿಗಳು ಪಾದ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ವೀರನಗೌಡ ಬಾದರ್ಲಿ ಅವರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಮತ್ತು ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!