
ಉದಯವಾಹಿನಿ ಬಾಗೇಪಲ್ಲಿ: ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರು ತಿಳಿಸಿದರು. ತಾಲ್ಲೂಕಿನ ಗೂಳೂರು ಗ್ರಾಮದಲ್ಲಿ ಸೋಮವಾರ ಭೋವಿ ಸಂಘದ ವತಿಯಿಂದ 2022-23ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ,ಶತಮಾನಗಳಿಂದಲೂ ಭೋವಿ ಸಮುದಾಯವು ಕಲ್ಲುಬಂಡೆ ಕುಟ್ಟುವ ಕಸುಬಿನಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದಾಗ ಬಹಳಷ್ಟು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವೆಡೆ ಶಿಕ್ಷಣಕ್ಕೆ ಆಧ್ಯತೆ ನೀಡುತ್ತಿದ್ದು, ಸಮುದಾಯದ ಕೆಲವರು ಶೈಕ್ಷಣಿಕವಾಗಿ ಉನ್ನತ ಸಾಧನೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. ಪೊಲೀಸ್ ಇಲಾಖೆ,ಕಂದಾಯ ಇಲಾಖೆ,ಶಿಕ್ಷಣ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಅದರಂತೆ ಎಲ್ಲ ಪೋಷಕರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಯಾವುದೇ ಸಹಾಯ ಕೇಳಿದರೂ ನಾನು ಮಾಡುತ್ತೇನೆ ಎಂದು ತಿಳಿಸಿದರು. ನಂತರ ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರವನ್ನು ಉದ್ಯಮಿ ಉದ್ಯಮಿ ರಂಗಸ್ವಾಮಿಯವರು ನೀಡಿದರು.ಈ ಸಂಧರ್ಭದಲ್ಲಿ ಭೋವಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಂಬು ಶ್ರೀನಿವಾಸ್,ರಾಮಾಂಜನೇಯಲು,ರಂಗಸ್ವಾಮಿ,ಟಿ.ಆರ್ ಶಂಕರ,ಎನ್ ಕೃಷ್ಣಪ್ಪ,ಶ್ರೀಮತಿ ಲಕ್ಷ್ಮೀ, ನಂಜುಂಡಪ್ಪ,ರಾಮಾಂಜಿ,ಎ.ಮುದ್ದುಕೃಷ್ಣ,ಕೆ.ವಿ ಶ್ರೀನಿವಾಸ,ಡೆಪ್ಯೂಟಿ ತಹಶೀಲ್ದಾರ್ ವಿದ್ಯಾ, ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ನ ಪಿಎಸ್ಐ ಸತ್ತೀಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
