ಉದಯವಾಹಿನಿ ಕೋಲಾರ :- ಶಾಂತಿಯುತವಾಗಿ ಸಹ-ಬಾಳ್ವೆ ನಡೆಸುವ ಸಂದೇಶವನ್ನು ಸಾರುವ ರಕ್ಷಾಬಂಧನ ಹಬ್ಬವನ್ನು ಯೋಗ ಬಂಧುಗಳಿಗೆ, ಸಾರ್ವಜನಿಕರಿಗೆ, ಶಾಲಾ ಕಾಲೇಜಿನ ಮಕ್ಕಳಿಗೆ ರಕ್ಷೆ ಕಟ್ಟುವ ಮೂಲಕ ಭಾತೃತ್ವದ ಸಂದೇಶ ಸಾರೋಣ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸೌರ್ಪಣಿಕ ವಲಯ ಸಂಚಾಲಕರು ಹಾಗೂ ಯೋಗ ಶಿಕ್ಷಕರಾದ ಮಾರ್ಕೊಂಡಣ್ಣ ನವರು ತಿಳಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಗರದ ವಕೀಲರ ಭವನ ಶಾಖೆಯಲ್ಲಿ ಯೋಗಾಭ್ಯಾಸದ ಬಳಿಕ ಭಾರತ ಮಾತೆಗೆ ಆರತಿ ಬೆಳಗಿ, ವಂದೇಮಾತರಂ ಗೀತೆ ಹಾಡಿ, ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾಬಂಧನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ರಕ್ಷ ಬಂಧನ ಹಬ್ಬವು ತಂಗಿನ ಅಣ್ಣನಿಗೆ ರಕ್ಷೆಯನ್ನು ಕಟ್ಟಿ ರಕ್ಷಣೆ ಕೋರುವುದು, ಸಹೋದರತ್ವದ ಮಹತ್ವ ಸಾರುವ ರಕ್ಷಾಬಂಧನವು ವಿಶ್ವ ಭ್ರಾತೃತ್ವ ಸಾರುವ ಮಹತ್ವದ ಹಬ್ಬವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ರವಿಕುಮಾರ್ ಅಣ್ಣನವರು ಯೋಗಬಂಧುಗಳಿಗೆ ರಕ್ಷಾಬಂಧನ ಹಬ್ಬದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.ಈ ವೇಳೆ ಯೋಗ ಬಂಧುಗಳಾದ ಅಶೋಕ್, ಪತ್ರಕರ್ತ ಚಂದ್ರು, ರಾಮಮೂರ್ತಿ, ಕೃಷ್ಣೇಗೌಡ, ಚಲಪತಿ, ಮಂಜುನಾಥ್, ಉಮಾಶಂಕರ್, ಮಂಜಣ್ಣ, ವಿಜಯಲಕ್ಷ್ಮಿ, ಬೀಬಿ ಜಾನ್, ರಮ್ಯ, ಲಕ್ಷ್ಮೀ, ಆಶಾ, ದೇವಿಕ, ಸವಿತ, ಮಮತ, ರಾಣಿ, ಸತೀನಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!