ಉದಯವಾಹಿನಿ, ಕೋಲಾರ : ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತವರಿನ ಕ್ಷೇತ್ರವಾದ ಸಂಸ್ಕೃತಿ ನಗರಿ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಆಡಳಿತ ರೂಢ ಪಕ್ಷವು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಕರೆ ತಂದು ಬುಧವಾರ ಚಾಲನೆ ನೀಡಿದರು. ಅದರೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಗೃಹ ಲಕ್ಷ್ಮೀ ಭಾಗ್ಯ ದೊರೆಯದೆ ಇರುವುದು ಹತಾಶೆಯ ಮಾತುಗಳು ಕೇಳಿ ಬರುತ್ತಿದೆ.
ಕಾಂಗ್ರೇಸ್ ಪಕ್ಷವು ಚುನಾವಣೆಗೆ ಮುನ್ನ ನೀಡಿದ್ದ ಪಂಚ ಖಾತ್ರಿ ಯೋಜನೆಯಲ್ಲಿ ೪ನೇ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಆಡಳಿತ ಚುಕ್ಕಾಣಿ ಹಿಡಿದ ೧೦೦ ದಿನದ ನಂತರ ಜಾರಿಗೆ ತಂದಿದೆ. ಕಾಂಗ್ರೇಸ್ ಪಕ್ಷವು ಚುನಾವಣೆಗೆ ಮುನ್ನ ನೀಡಿದ ಭರವಸೆಯಲ್ಲಿ ಈ ಯೋಜನೆಗೆ ಯಾವೂದೇ ಕರಾರುಗಳು ಅಥವಾ ಷರತ್ತುಗಳನ್ನು ವಿಧಿಸಿರಲಿಲ್ಲ ಅದರೆ ನಂತರದಲ್ಲಿ ದಿನಕ್ಕೂಂದು ಕರಾರುಗಳನ್ನು ಹಾಕುವ ಮೂಲಕ ಹಲವಾರು ಬದಲಾವಣೆಗೆ ತಂದಿತು. ಅಂತ್ಯೂದಯ, ಬಿ.ಪಿ.ಎಲ್. ಮತ್ತು ಎ.ಪಿ.ಎಲ್ ಕಾರ್ಡ್‌ಗಳ ಪರಿಷ್ಕರಣೆಯಿಂದಾಗಿ ನೊಂದಣಿ ಕಾರ್ಯದಲ್ಲಿ ತಾಂತ್ರಿಕ ದೋಷಗಳಿದೆ ಎಂದು ಆರ್ಹ ಫಲಾನುಭವಿಗಳ ನೋಂದಣೆ ಮಾಡದೆ ಸೇವಾಸಿಂದು ಕಚೇರಿಗಳಿಗೆ ಅಲೆದಾಡಿಸಿ ಕೊನೆಗೆ ಸೆಪ್ಟೆಂಬರ್ ಮಾಹೆಯ ಮೊದಲ ಅಥಾವ ಎರಡನೇ ವಾರದಲ್ಲಿ ಈ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಂದಲೇ ರೆಡಿಮೇಡ್ ಉತ್ತರಗಳು ಬರುತ್ತಿದ್ದವು ಹೊರತಾಗಿ ತಾಂತ್ರಿಕ ದೋಷದ ಬಗ್ಗೆ ಯಾವೂದೇ ರೀತಿ ಖಚಿತವಾದ ಕಾರಣವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!