ಉದಯವಾಹಿನಿ ಸಿಂಧನೂರು:  ಸತ್ಯಾನ್ವೇಷಕ, ಸಂಶೋಧಕ ಡಾ : ಎಂ.ಎಂ.ಕಲಬುರಗಿಯವರನ್ನು ಭೌತಿಕವಾಗಿ ಹತ್ಯೆ ಮಾಡಿರಬಹುದು ಆದರೆ ಕಲಬುರಗಿಯವರ ಸತ್ಯ ಸಂಶೋಧನೆಗೆ ಯಾವತ್ತು ಸಾವಿಲ್ಲ ! ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಷ್ಟ್ರೀಯ ಮುಖಂಡರಾದ, ಪಶ್ಚಿಮ ಬಂಗಾಳದ ಅಸೀಮಗಿರಿಯವರು ಅವರಿಂದು ನಗರದ ಸಿಂಧನೂರಿ ಶ್ರಮಿಕ ಭವನದಲ್ಲಿ ಆರ್ ಸಿಎಫ್ ಆಯೋಜಿಸಿದ ಡಾ: ಎಂ.ಎಂ.ಕಲಬುರಗಿಯವರ 8ನೇ ವರ್ಷದ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸತ್ಯದ ಪ್ರತಿಪಾದಕರೆಲ್ಲರನ್ನೂ ಒಂದೇ ತೆರನಾಗಿ ಹತ್ಯೆ ಮಾಡಲಾಗಿದೆ. ದಾಭೋಲ್ಕರ್, ಪಾನ್ಸಾರೆ, ಕಲಬುರಗಿ, ಗೌರಿ ಲಂಕೇಶ’ರ ಸಾವುಗಳನ್ನು ಗಮನಿಸಿದರೆ ಅವರ ವೈಚಾರಿಕ ಸಂಘರ್ಷಗಳಿಗೆ ಹೆದರಿದ ತೀವ್ರ ಬಲ ಪಂಥೀಯವಾದಿಗಳು ಅವರನ್ನು ಭೌತಿಕವಾಗಿ ಹತ್ಯೆ ಮಾಡಿರಬಹುದು, ಸತ್ಯಕ್ಕೆ ಸಾವಿಲ್ಲಾ, ಎಂಬುದನ್ನು ಮರೆತಿದ್ದಾರೆ. ಜನತೆಗಾಗಿ ಮಡಿದ ಹುತಾತ್ಮರ ಆಶಯಗಳ ಹಾದಿಯಲ್ಲಿ ಮುನ್ನೆಡೆದು ಕೋಮುವಾದಿಗಳ ಜನದ್ರೋಹಿ ಹುನ್ನಾರಗಳನ್ನು ಬಯಲುಗೊಳಿಸುವ ಕಾರ್ಯಭಾರಗಳಿಗೆ ಹೆಗಲೊಡ್ಡೋಣವೆಂದು ಬಸವ ಕೇಂದ್ರದ ಪ್ರಮುಖರಾದ, ವೀರಭದ್ರಗೌಡ ಅಮರಾಪೂರ ಮಾತನಾಡಿ, ಲಿಂಗಾಯತ ಧರ್ಮದ ಸತ್ಯಾನ್ವೇಷಣೆ ಕೈಗೊಂಡ ಡಾ: ಎಂ.ಎಂ.ಕಲಬುರಗಿಯವರನ್ನು ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರನ್ನು ಇನ್ನಿಲ್ಲವಾಗಿಸಿದ್ದಾರೆ. ಅವರು ನಡೆದ ಹಾದಿಯನ್ನು ಸವೆಸಲು, ಅಳಿಸಿ ಹಾಕಲು ಜಗತ್ತಿನ ಯಾವುದೋ ಶಕ್ತಿಗೂ ಸಾದ್ಯವಿಲ್ಲವಾಗಿದೆ. ಅದು ನಿತ್ಯ ನೂತನವಾಗಿಯೇ ಅಜರಮರವಾಗಿರಲಿದೆ ಎಂದರು.

ಜನಪರ ಕವಿಗಳಾದ ಸಿ.ದಾನಪ್ಪ ನಿಲೋಗಲ್, ಹೆಚ್.ಎನ್.ಬಡಿಗೇರ , ಆರ್.ಸಿ.ಎಫ್ ನ ರಂಜಿತ್ ಮುಜುಂದಾರ್, ಎಂ.ಗಂಗಾಧರ ಮುಂತಾದವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆರ್.ಸಿಎಫ್ ನ ಆದೇಶ ನಗನೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಕಲಬುರಗಿ ಕುರಿತು ಕ್ರಾಂತಿಕಾರಿ ಹಾಡುಗಳನ್ನು ಹಾಡಿದರು. ಚಿನ್ನಪ್ಪ ಕೊಟ್ರಿಕಿ, ಅಜೀಜ್ ಜಾಗೀರದಾರ, ಸಂತೋಷ, ಮಾರುತಿ, ಚಿದಾನಂದ, ಸೋಮು, ಮಾಬುಸಾಬ ಬೆಳ್ಳಟ್ಟಿ, ಹೆಚ್.ಆರ್.ಹೊಸಮನಿ, ಉಷಾ ಎಂ.ಜಿ, ರುಕ್ಮೀಣೆಮ್ಮ,ಮುದಿಯಪ್ಪ, ಅಪ್ಪಣ್ಣ,ವೆಂಕಟೇಶ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ನೂರಾರು ಪ್ರತಿನಿಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!