ಉದಯವಾಹಿನಿ, ನವದೆಹಲಿ: ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಸೆಪ್ಟಂಬರ್ 18 ರಿಂದ 22ರ ವರೆಗೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ದೇಶದ ಅಮೃತ ಕಾಲದಲ್ಲಿ ಐದು ದಿನಗಳ ಕಾಲ ವಿಶೇಷ ಅಧಿವೇಶಷನ ನಡೆಯಲಿದ್ದು ಫಳಪ್ರದ ಚರ್ಚೆ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ.
ಈ ನಡುವೆ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧೀ ಅವರು ತರಾತುರಿಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.ವಿಶೇಷ ಅಧಿವೇಶ “ಬಹುಶಃ ಸ್ವಲ್ಪ ಗಾಬರಿಯ ಸೂಚಕ ಎಂದು ಭಾವಿಸುತ್ತೇನೆ. ಸಂಸತ್ತಿನಲ್ಲಿ ಮಾತನಾಡುವಾಗ ಸಂಭವಿಸಿದ ರೀತಿಯ ಗಾಬರಿ, ದಿಢೀರ್ ಸಂಸತ್ತಿನ ಸದಸ್ಯತ್ವ ಹಿಂತೆಗೆದುಕೊಳ್ಳುವಂತೆ ಮಾಡಿದೆ. ಈ ವಿಷಯಗಳು ಪ್ರಧಾನಿಯವರಿಗೆ ತುಂಬಾ ಹತ್ತಿರವಾಗಿರುವುದರಿಂದ ಭಯಭೀತವಾಗಿದೆ ಎಂದಿದ್ದಾರೆ.
ಸಂಸತ್ತಿನ ಹೊರಗೆ ಮತ್ತು ಒಳಗೆ ಯಾವಾಗೆಲ್ಲಾ ಅದಾನಿ ವಿಷಯ ಮುಂದಿಟ್ಟುಕೊಂಡು ಹೋರಾಟ ಮಾಡಿದ್ದೇನೆ ಆಗಲೆಲ್ಲಾ ಪ್ರಧಾನಿ ಅವರಿಗೆ ನಡುಕ ಉಂಟಾಗುತ್ತಿದೆ. ಹೀಗಾಗಿ ಏನಾದರೂ ಒಂದು ಮಾಡ್ತಾ ಇರ್ರಾತೆ ಎಂದು ಅವರು ತಿಳಿಸಿದ್ಧಾರೆ. ಭಾರತದಂತಹ ದೇಶಕ್ಕೆ ಬಹಳ ಮುಖ್ಯವಾದದ್ದು ಆರ್ಥಿಕ ವಾತಾವರಣ ಮತ್ತು ಇಲ್ಲಿ ಕಾರ್ಯನಿರ್ವಹಿಸುವ ವ್ಯವಹಾರಗಳಲ್ಲಿ ಸಮತಟ್ಟಾದ ಆಟದ ಮೈದಾನ ಮತ್ತು ಪಾರದರ್ಶಕತೆ ಇದೆ. ಎರಡು ಜಾಗತಿಕ ಹಣಕಾಸು ಪತ್ರಿಕೆಗಳು ಬಹಳ ಮುಖ್ಯವಾದ ಪ್ರಶ್ನೆಯನ್ನು ಎತ್ತಿವೆ. ಭಾರತದಲ್ಲಿ ಹೂಡಿಕೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಭಾರತದ ಗ್ರಹಿಕೆಗೆ ಪರಿಣಾಮ ಬೀರಿವೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!