
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಚಿಮ್ಮಾಯಿದ್ಲಾಯಿ ಹಾಗೂ ಕೋಳ್ಳೂರ ಗ್ರಾಮಗಳ ಅಂಚೆ ಕಛೇರಿಯಲ್ಲಿನ ಬಡವರ ಹಣ ಅಂಚೆ ಅಧಿಕಾರಿಗಳು ಲೂಟಿ ಮಾಡಿದ್ದು ತನಿಖೆ ನಡೆಸಿ ಬಡವರ ಹಣ ಬಡವರಿಗೆ ವರ್ಗಾವಣೆ ಮಾಡಿ ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪರಿಶೀಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಶಿವಯೋಗಿ ರುಸ್ತಾಂಪೂರ ಒತ್ತಾಯಿಸಿದರು.
ತಾಲ್ಲೂಕಿನ ಚಿಮ್ಮಾಯಿದ್ಲಾಯಿ ಗ್ರಾಮದ ಕಲಬುರ್ಗಿ ಚಿಂಚೋಳಿ ಮುಖ್ಯ ರಸ್ತೆಯ ಪಕ್ಕ ದಲಿತ ಸೇನೆ ಸಮಿತಿ ಹಾಗೂ ಬಿಜೆಪಿ ಪರಿಶೀಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಶಿವಯೋಗಿ ರುಸ್ತಾಂಪೂರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿ ಅವರು,ಅಂಚೆ ಕಛೇರಿಯಲ್ಲಿ ಲಕ್ಷಾಂತರ ರೂಪಾಯಿ ಜನರ ಖಾತೆಗಳಿಂದ ಲೂಟಿ ಮಾಡಿದ್ದು ಅಂಚೆ ಕಚೇರಿಯ ಮೇಲಾಧೀಕಾರ ಗಮನಕ್ಕೆ ಕೂಡ ಬಂದಿದ್ದು ಕಳೆದ ಎರಡು ತಿಂಗಳಿಂದ ತನಿಖೆ ನಡೆಸುತ್ತಿದ್ದಾರೆ ಎಂದು ನೆಪ ಹೇಳುತ್ತಿದ್ದಾರೆ,ಇದರಿಂದ ಕೋಪಗೊಂಡ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ ಎಂದರು. ದಲಿತ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಚಿಮ್ಮಾಯಿದ್ಲಾಯಿ ಮಾತನಾಡಿ ಗ್ರಾಮದ ಹರಿಜನವಾಡದ ಜನರಿಗೆ ಅಂತ್ಯಸಂಸ್ಕಾರ ಮಾಡಲು ರುದ್ರಭೂಮಿ ಮಂಜೂರು ಮಾಡಬೇಕು,ದಲಿತ ಓಣಿಯಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭ ಮಾಡಬೇಕು,ಜೇಸ್ಕಾಂ ಇಲಾಖೆ ವತಿಯಿಂದ ಸರ್ಕಾರದಿಂದ ದಲಿತರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವುಲ್ಲಿ ಜೇಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು,ಚಿಮ್ಮಾಯಿದ್ಲಾಯಿ ಗ್ರಾಮದ ಶಾಲಾಮಕ್ಕಳಿಗೆ ಬಸ್ಸಿನ ಬಹಳಷ್ಟು ಸಮಸ್ಯೆವುಂಟಾಗಿದ್ದು ವಿಧ್ಯಾರ್ಥಿಗಳು ತೊಂಜರೆ ಅನುಭವಿಸುತ್ತಿದ್ದು ಬೆಳಿಗ್ಗೆ 9ರಿಂದ 10ಗಂಟೆ ಹಾಗೂ ಸಾಯಂಕಾಲ 4ರಿಂದ 5ಗಂಟೆಯವರೆಗೆ ಪ್ರತ್ಯೇಕ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿ ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು.
ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಮಳೆಗಾಲ ಬೆಸಿಗೆಕಾಲದಲ್ಲಿ ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಶೀಘ್ರದಲ್ಲೇ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗುಂಡಪ್ಪ ಔರಾದಿ,ಮಲ್ಲಿಕಾರ್ಜುನ ಕೊಟಪಳ್ಳಿ,ಮೊಗಲಪ್ಪ,ಇಮಾಮ್ ಪಟೇಲ,ರಾಜೇಂದ್ರಪ್ಪ,ಗೌತಮ್ ವರ್ಮ,ಮಹಾದೇವ,ನಾಗೇಂದ್ರಪ್ಪಾ,ನಾಗಪ್ ಪ,ಉಮೇಶ,ಪ್ರೇಮನಾಥ,ಮಾರುತಿ,ಶಾಲಾವಿ ಧ್ಯಾರ್ಥಿಗಳು ಅನೇಕರಿದ್ದರು.
