ಉದಯವಾಹಿನಿ ಕೆ.ಆರ್.ಪೇಟೆ: ಜನಪರ ಆಡಳಿತದ ಮೂಲಕ ಕನ್ನಡ ನಾಡಿನ ಮನೆಮಾತಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕರ್ನಾಟಕ ರಾಜ್ಯದ ಆಸ್ತಿಯಾಗಿದ್ದು ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಶಾಸಕ ಹೆಚ್.ಟಿ ಮಂಜು ವಿವಿಧ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.ಅವರು ತಾಲ್ಲೂಕು ಜೆಡಿಎಸ್ ಕಾರ್ಯಕರ್ತರೊಂದಿಗೆ ಪಟ್ಟಣದ ಹೇಮಗಿರಿ ರಸ್ತೆಯ ಶ್ರೀ ಮುತ್ತುರಾಯಸ್ವಾಮಿ, ಶ್ರೀ ಆಂಜನೇಯಸ್ವಾಮಿ ಶ್ರೀಶನೇಶ್ವರ ದೇವಸ್ಥಾನಗಳಲ್ಲಿ ವಿಶೇಷಪೂಜೆ ಸಲ್ಲಿಸಿ ಮಾತನಾಡಿದರು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಈ ದೇಶದ ಪ್ರಧಾನಮಂತ್ರಿಯ ಮಗನಾಗಿದ್ದರೂ ಸರ್ವರನ್ನೂ ಬಹಳ ಪ್ರೀತಿಯಿಂದ ಕಾಣುವ ಮನೋಭಾವನೆಯನ್ನು ಮೈಗೂಡಿಸಿಕೊಂಡಿದ್ದಾರೆ. ಕುಮಾರಣ್ಣ ಹಾಗೂ ದೇವೇಗೌಡ ಅಪ್ಪಾಜಿಯವರಿಗೆ ಐದು ವರ್ಷಗಳ ಕಾಲ ಅವಕಾಶ ಸಿಕ್ಕಿದ್ದರೆ ರಾಜ್ಯ ಹಾಗೂ ದೇಶ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿತ್ತು. ೨೦೨೩ರ ಪಂಚರತ್ನ ಕಾರ್ಯಕ್ರಮ ರೈತರ ಬದುಕನ್ನು ಹಸನು ಮಾಡುವ ಕಾರ್ಯಕ್ರಮವಾಗಿದ್ದು ರಾಜ್ಯದ ಜನತೆ ಅಲ್ಪತೃಪ್ತಿಗೆ ಆಸೆಪಟ್ಟರು. ಇಂದಿಗೂ ಸಹ ಪ್ರತಿದಿನ ೧೦೦-೨೦೦ ಜನ ಕುಮಾರಣ್ಣನ ಮನೆ ಬಾಗಿಲಿಗೆ ಬಂದು ಕಷ್ಟಸುಖಗಳನ್ನು ಹೇಳಿಕೊಳ್ಳುತ್ತಾರೆ. ಒಂದೆರಡು ಬಾರಿ ಹೃದಯದ ಶಸ್ತçಚಿಕಿತ್ಸೆಗೆ ಒಳಗಾಗಿದ್ದರೂ ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಹಗಲಿರುಳು ಚಿಂತಿಸುವ ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರಣ್ಣನ ಹೆಸರಿನಲ್ಲಿ ಭಕ್ತಾದಿಗಳಿಗೆ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು..
ಇದೇ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಡಾಲುರವಿ, ಜಿಲ್ಲಾ ಜೆಡಿಎಸ್ ಪಕ್ಷದ ಹಿರಿಯ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿನಾಗೇಶ್, ತಾ.ಪಂ ಮಾಜಿ ಸದಸ್ಯ ಮೋಹನ್, ವಕೀಲ ಧನಂಜಯ್, ಹೋಬಳಿ ಘಟಕಗಳ ಜೆಡಿಎಸ್ ಅಧ್ಯಕ್ಷರುಗಳಾದ ವಸಂತಕುಮಾರ್, ಬಸವಲಿಂಗಪ್ಪ, ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ಮಂಜುನಾಥ್, ತಾ.ಪಂ.ಮಾಜಿ ಉಪಾಧ್ಯಕ್ಷ ರಾಮೇಗೌಡ, ಬಂಡಿಹೊಳೆ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ವಡ್ಡರಹಳ್ಳಿ ಮಹದೇವೆಗೌಡ, ಬೈರಾಪುರ ಹರೀಶ್, ಜೆಡಿಎಸ್ ಯುವ ಘಟಕದ ಲೋಕೇಶ್, ಜಗ ರವಿ ಶ್ರೀನಿವಾಸ್, ತಾಲ್ಲೂಕು ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಆರ್.ಲೋಕೇಶ್, ಅಲೋಕ್, ಶಾಸಕರ ಆಪ್ತಸಹಾಯಕ ಪ್ರತಾಪ್, ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *

error: Content is protected !!