ಉದಯವಾಹಿನಿ ಚಿಂತಾಮಣಿ : ಶಾಲಾ ಕಾಲೇಜು‌ ಮಕ್ಕಳಿಗೆ ಸಂವಹನದ ಅರಿವು ಹಾಗೂ ಕೇಳಲು,ಕಲಿಯಲು ಬೇಕಾದ ಮೂಲಭೂತ ಸೌಕರ್ಯ ಗಳ ಕೌಶಲ್ಯ ತರಭೇತಿ‌ ಕಾರ್ಯಕ್ರಮವನ್ನು ಇಂದು ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಕಾಲೇಜು ಸಂಭಾಗಣದಲ್ಲಿ ಏರ್ಪಡಿಸಲಾಗಿತ್ತು.ಮುಖ್ಯ ಅಥಿತಿಗಳಾಗಿ ನೂರ್ ಮಹಮದ್ ಜಿಲಾನಿ ಅವರು ಆಗಮಿಸಿದ್ದು ಕಾಲೇಜು ವಿದ್ಯಾರ್ಥಿಗಳಿಗೆ ಸಂವಹನ ಮತ್ತು‌ ಕೇಳುವ ಕೌಶಲ್ಯದ ಅಭಿವೃದ್ಧಿ ಬಗ್ಗೆ ಅರಿವು ಮೂಡಿಸಿದರು.ಇನ್ನೂ ವಿದ್ಯಾರ್ಥಿಗಳಾಗಲಿ ಅಥವಾ ಉದ್ಯೋಗಿಗಳಗಲೀ ಸಂವಹನ ಕೌಶಲವಿದ್ದರೆ ಮಾತ್ರ ಜೀವನದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ಇದೇ ವೇಳೆ ಸಲಹೆಗಳನ್ನು ಕೊಟ್ಟರು.ಇನ್ನೂ ಕಾರ್ಯಕ್ರಮದ‌ ಸದುಪಯೋಗ ಪಡೆದುಕೊಂಡ‌ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಹಾಗೂ ಸಂವಹನ ಕೌಶಲ್ಯದ ಬಗ್ಗೆ ತಿಳಿದು ಕೊಳ್ಳಲು ಕಾರ್ಯಕ್ರಮ ಉತ್ತಮ‌ ವೇದಿಕೆಯಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಕುಮಾರಸ್ವಾಮಿ, ಸಿಬ್ಬಂದಿ ಅನಿಲ್ ಕುಮಾರ್,ಮೊಹಮದ್ ರೆಹಮಾನ್,ಶಬೀರ್ ಅಹ್ಮದ್,ರಿಜ್ವಾನ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!