ಉದಯವಾಹಿನಿ,ಕೆ.ಆರ್.ಪೇಟೆ: ಎಳೆಯ ಮಕ್ಕಳಿಂದ ವಯೋವೃದ್ದರವರೆಗಿನ ಎಲ್ಲರಿಗೂ ಪೌಷ್ಟಿಕ ಆಹಾರದ ಅಗತ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದಲ್ಲಿ ರಾಷ್ಟಿçÃಯ ಪೋಷಣ್ ಮಾಸಾಚರಣೆ ಪ್ರಯುಕ್ತ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಪದಾರ್ಥಗಳು ಮಾನವನ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯಕವಾಗಿರುವ ಎಲ್ಲಾ ¨ಗೆಯ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗುವುದರಿಂದ ಎಳೆಯ ಮಕ್ಕಳಿನಿಂದ ಮುಪ್ಪಿನ ವಯಸ್ಸಿನವರೆಗಿನ ಎಲ್ಲಾ ವಯಸ್ಸಿನವರು ಎಲ್ಲಾ ಪೋಷಕಾಂಶಗಳುಳ್ಳ ಸಮತೋಲನ ಆಹಾರವನ್ನು ಸೇವಿಸಬೇಕು. ಯಾವುದೇ ಒಂದು ಪೋಷಕಾಂಶ ಕಡಿಮೆಯಾದರೂ ಅದಕ್ಕೆ ಸಂಬAಧಿಸಿದ ಅಂಗಾAಗ ಬೆಳವಣಿಗೆ ಹೊಂದದೇ ಕುಂಠಿತವಾಗುತ್ತದೆ. ಇದಕ್ಕಾಗಿಯೇ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ, ಗರ್ಭಿಣೀಯರಿಗೆ, ಬಾಣಂತಿಯರಿಗೆ ಮೊಳಕೆಕಾಳು, ಮೊಟ್ಟೆ, ಹಾಲು, ಬೆಲ್ಲ, ಶೇಂಗಾಚಿಕ್ಕಿ, ಹೆಸರುಕಾಳು, ಕಡಲೆಕಾಳು ಸೇರಿದಂತೆ ವಿವಿಧ ಬಗೆಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದೆ. ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಎಲ್ಲರಿಗೂ ಪೌಷ್ಟಿಕ ಆಹಾರ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಂಧಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನೋಜ್, ಗ್ರಾಮ ಪಂಚಾಯಿತಿ ಉಪಾದ್ಯಕ್ಷ ನಂಜಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ, ಪೋಷಣ್ ಅಭಿಯಾನದ ವನಜಾಕ್ಷಿ, ಆರೋಗ್ಯ ಇಲಾಖೆಯ ಜಯಶೀಲ ಸೇರಿದಂತೆ ಸಿಂಧಘಟ್ಟ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
