ಉದಯವಾಹಿನಿ, ಕೆ.ಆರ್. ಪುರ : ಬಾಲ ಪ್ರತಿಭೆಗಳಾದ ರಚನಾ ಮತ್ತು ಜ್ಞಾನ ಅವರನ್ನು ಭಾರತೀಯರ ಸೇವಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಬಾಲಪ್ರತಿಭೆಗಳನ್ನು ಅಭಿನಂದಿಸಿ ಮಾತನಾಡಿದ ಭಾರತೀಯರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರಾಮಚಂದ್ರ ಅವರು
ಭಾರತ ಕಲಾರತ್ನ ಪ್ರಶಸ್ತಿ ಪಡೆದು ಚಿಕ್ಕವಯಸ್ಸಿನಲ್ಲಿ ಸಾಧನೆ ಮಾಡಿರುವುದು ಸಂತಸದ ಸಂಗತಿ ಇವರನ್ನು ಅಭಿನಂದಿಸಿ ಆರೈಸುವುದು ನಮ್ಮೆಲ್ಲ ಕರ್ತವ್ಯ ಎಂದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಪ್ರತಿ ಹಂತದಲ್ಲೂ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಆಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು,ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಹಾರೈಸಿದರು.
ಭಾರತೀಯ ಸಂಪ್ರದಾಯದಂತೆ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ರಕ್ಷಾ ಬಂಧನ ಹಬ್ಬ ವಿಶೇಷ ವೈಶಿಷ್ಟ್ಯ ಹೊಂದಿದೆ, ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವೆ ಭಾತೃತ್ವ ಬೆಸೆಯುವ ಹಬ್ಬ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಮೂಲ ನಿವಾಸಿ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ಮುನಿಮಾರಪ್ಪ, ಭಾರತೀಯ ಸ್ತ್ರೀ ಶಕ್ತಿ ಸಂಘದ ರಾಜ್ಯಾಧ್ಯಕ್ಷೆ ಎಸ್.ಭಾಗ್ಯ ಮುಖಂಡರಾದ ಪ್ರಶಾಂತ್ ಚಕ್ರವರ್ತಿ, ಗುರುರಾಜ್, ವೆಂಕಿ, ಆಂಜಿನಪ್ಪ, ರಾಮಣ್ಣ ಇತರರು ಪಾಲ್ಗೊಂಡರು.
