
ಉದಯವಾಹಿನಿ,ಚಿಂಚೋಳಿ: ಸಹಕಾರ ಕ್ಷೇತ್ರವನ್ನು ಪೂರ್ವಜರು ಭದ್ರ ಬುನಾದಿ ಹಾಕಿ ಸಹಕಾರ ಕ್ಷೇತ್ರಗಳು ಬಡವರಿಗೆ ಅನುಕೂಲವಾಗುವಂತೆ ಸ್ಥಾಪನೆ ಮಾಡಿ ಗದಗದಿಂದ ಸಹಕಾರ ಕ್ರಾಂತಿ ಪ್ರಾರಂಭವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃಧ್ಧಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.ಪಟ್ಟಣದ ವೀರಭದ್ರೇಶ್ವರ ಕೋ-ಅಪರೇಟಿವ್ ಬ್ಯಾಂಕನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರಗಳಿಗೆ ಹಿಂನಡೆಯಾಗಿದ್ದು,ನೀಸ್ವರ್ಥ ಭಾವನೇ ಪರಿಶ್ರಮ ಮಾಡಿದರೆ ಮಾತ್ರ ವೀರಭದ್ರೇಶ್ವರ ಬ್ಯಾಂಕ ತರಹ 25ವರ್ಷಗಳಿಂದ ಸರ್ವ ಸದಸ್ಯರ ಬೆಂಬಲದೊಂದಿಗೆ ಎ ಗ್ರೇಡ್ ನಲ್ಲಿ ಉತ್ತಮ ಸ್ಥಿತಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ.
ಚಿಂಚೋಳಿ ಕ್ಷೇತ್ರವು ರಾಜ್ಯದ ಕೊನೆಯ ಅಂಚಿನಲ್ಲಿ ಇದ್ದರು ಸಹ ಕ್ಷೇತ್ರದ ವೀರೇಂದ್ರ ಪಾಟೀಲ,ವೈಜೀನಾಥ ಪಾಟೀಲ್,ದೇವೀಂದ್ರಪ್ಪಾ ಘಾಳಪ್ಪ ಅಂತಹ ಮಹಾನ ನಾಯಕರು ಕ್ಷೇತ್ರದ ಹೆಸರು ರಾಜ್ಯದಲ್ಲಿ ಅಮರವಾಗಿ ಇರುವಂತೆ ಹೆಸರುವಾಸಿ ಮಾಡಿದ್ದಾರೆ. ಸೇಡಂ ಹಾಗೂ ಚಿಂಚೋಳಿ ಮತಕ್ಷೇತ್ರಗಳು ಅಭಿವೃದ್ಧಿ ಪಡಿಸಲು ನನ್ನ ಜವಾಬ್ದಾರಿಯಾಗಿದೆ, ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುತ್ತಿದೆ ಐದು ಗ್ಯಾರಂಟಿಗಳನ್ನು ಭರವಸೆ ನೀಡಿದೇವು ಈಗಾಗಲೇ ನಾಲ್ಕು ಗ್ಯಾರಂಟಿ ಈಡೇರಿಸಿದ್ದೇವೆ ಯುವನಿಧಿ ಯೋಜನೆ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು,ಮಾಜಿ ಶಾಸಕ ಕೈಲಾಸನಾಥ ವಿರೇಂದ್ರ ಪಾಟೀಲ,ಸುಭಾಷ್ ರಾಠೋಡ್,ಅಧ್ಯಕ್ಷ ಬಸವರಾಜ ಮಲಿ,ಉಪಾಧ್ಯಕ್ಷ ಸುಭಾಶ್ಚಂದ್ರ ಸೀಳಿನ,ಬಸವಣ್ಣ ಪಾಟೀಲ,ಸುಭಾಶ್ಚಂದ್ರ ಯಂಪಳ್ಳಿ,ಶರಣಪ್ಪಾ,ಯುಸೂಫ್ ಅಲಿ,ನಾಗರಾಜ ಕಲಬುರ್ಗಿ,ಜಗನ್ನಾಥರಡ್ಡಿ,ಮಲ್ಲೇಶ್ ವರಿ ಜಾಬಶೇಟ್ಟಿ,ಮಹಾನಂದಾ ಪರ್ವತಯ್ಯ,ಶಿವಪುತ್ರ ಸೀಳಿನ,ಬಸವರಾಜ ಯಲಾಲ್,ವ್ಯವಸ್ಥಾಪಕ ನಾಗಶೇಟ್ಟಿ ಮೈನಳ್ಳಿ,ಜಯರಾಮ ಅಗ್ನಿಹೋತ್ರಿ,ಅಶೋಕ ಪಾಟೀಲ,ಬಾಬುರಾವ ಪಾಟೀಲ,ಬಸಯ್ಯ ಗುತ್ತೇದಾರ,ಭೀಮರಾವ ಟಿಟಿ,ಮಹೇಮೂದ ಪಟೇಲ,ಮಧುಸೋದನರೆಡ್ಡಿ,ಬಸವರಾಜ ಮಲಿ ಸ್ವಾಗತಿಸಿದರು,ಮಲ್ಲಿಕಾರ್ಜುನ ಪಾಲಾಮೋರ್ ನಿರೂಪಿಸಿದರು,ನಾಗಶೇಟ್ಟಿ ಮೈನಳ್ಳಿ ವಂದಿಸಿದರು.
ವೀರಭದ್ರೇಶ್ವರ ಕೋ-ಅಪರೇಟಿವ್ ಬ್ಯಾಂಕ್ ನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಬ್ಯಾಂಕ್ ನ ನಿರ್ದೇಶಕರಿಗೆ ಹಾಗೂ ಪ್ರತಿಯೊಂದು ಸದಸ್ಯರಿಗೆ ಒಂದೊಂದು ಬೆಳ್ಳಿಯ ನಾಣ್ಯ ವಿತರಿಸಿದ್ದರು.
