ಉದಯವಾಹಿನಿ ತಾಳಿಕೋಟಿ : ಮನುಷ್ಯ ತನ್ನ ಜೀವನ ಅವಶ್ಯಕತೆಗಳಿಗಾಗಿ ಅನಿವಾರ್ಯ ಸಂದರ್ಭದಲ್ಲಿ ಸಾಲ ತೆಗೆದುಕೊಳ್ಳಲೇ ಬೇಕಾಗುತ್ತದೆ ದುಡ್ಡು ಜೀವನದ ಅತ್ಯಗತ್ಯವಾಗಿದೆ ಅದು ಇಲ್ಲದಿದ್ದರೆ ಏನು ಮಾಡಲು ಸಾಧ್ಯವಿಲ್ಲ ಆದರೆ ನಾವು ಮಾಡಿದ ಸಾಲ ನಮ್ಮ ಬದುಕನ್ನೇ ನುಂಗುವ ಹಾಗೆ ಇರಬಾರದು ಸಾಲ ಮರಳಿಸುವ ಉದ್ದೇಶವಿಟ್ಟು ಸಾಲ ಮಾಡುವುದನ್ನು ಕಲಿಯಿರಿ ಎಂದು ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ರವಿವಾರ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ 81ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯನ ಬದುಕು ಶಾಶ್ವತವಲ್ಲ ನಾವು ಸಂಪಾದಿಸಿದ ಸಂಪತ್ತು ನಮಗೆ ಸಿಕ್ಕ ಈ ಅಧಿಕಾರ ಎಲ್ಲವನ್ನು ಒಂದು ದಿನ ಬಿಟ್ಟು ಹೋಗಬೇಕಾಗಿದೆ ಈ ಪರಮ ಸತ್ಯವನ್ನು ನಾವೆಂದು ಮರೆಯಬಾರದು ಮಾನವೀಯತೆ ಹಾಗೂ ಪರಸ್ಪರ ಸಹಕಾರ ದೊಂದಿಗೆ ಬದುಕಲು ಪ್ರಯತ್ನಿಸಿ ಎಂದರು. ಸಹಕಾರ ಸಂಘಗಳ ಉಪನಿಬಂಧಕಿ ಎಸ್ ಕೆ ಭಾಗ್ಯಶ್ರೀ ಅವರು ಮಾತನಾಡಿ ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯವಾಗಿದೆ ರೈತಾಪಿ ಜನರ ಅನುಕೂಲಕ್ಕಾಗಿ ಪತ್ತಿನ ಸಹಕಾರಿ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಈ ಸಂಘವು ಸುಮಾರು 45 ಲಕ್ಷ ರೂಪಾಯಿ ಲಾಭವನ್ನು ಮಾಡಿರುವುದು ಅತ್ಯುತ್ತಮವಾದ ಸಾಧನೆಯಾಗಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಸದುಪಯೋಗವನ್ನು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಪ್ರವೀಣ್ ಪಾಟೀಲ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಅಧ್ಯಕ್ಷ ಬಸವರಾಜ್ ಎಂ ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೈಲಾಸಪೇಟೆ ಬಸವ ಪ್ರಭು ದೇವರು ಸಮ್ಮುಖವನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ತಾಲೂಕ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಉತ್ತನಾಳ ನಿವೃತ್ತ ಪ್ರಬಂಧಕ ಎಸ್ ಜಿ ಕುಂಬಾರ. ಚೇತನ್ ಬಾವಿಕಟ್ಟಿ ಸಂಘದ ಮಾಜಿ ಅಧ್ಯಕ್ಷ ಎಸ್‌.ಬಿ. ಇಲ್ಕಲ್ ಉಪಾಧ್ಯಕ್ಷ ಡಿ ಎಸ್ ಗೋಟಗುಣಕಿ. ಆಡಳಿತ ಮಂಡಳಿಯ ಸದಸ್ಯರಾದ ಎಸ್ ಬಿ ಇಲಕಲ್ಲ. ಸಿ ಎಸ್ ದೇಸಾಯಿ. ಡಿ ವಿ ಪಾಟೀಲ್. ಜಿ.ವಿ. ಮೂಲಿಮನಿ ಪರುಶುರಾಮ್ ತಂಗಡಗಿ ಎಸ್ ಆರ್ ಕಟ್ಟಿಮನಿ.ವಾಯ್.ಡಿ.ಬರದೇನಾಳ. ಜೆ ಎಸ್ ಬೊಮ್ಮಗೊಡ. ಎನ್ ಎಂ ಗೊರಗುಂಡಗಿ ಮುಖ್ಯ ಕಾರ್ಯನಿರ್ವಾಹಕ ಶಂಕರ್ ಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳು ಇದ್ದರು

Leave a Reply

Your email address will not be published. Required fields are marked *

error: Content is protected !!