ಉದಯವಾಹಿನಿ ಕೋಲಾರ :- ದಕ್ಷ ಪೊಲೀಸ್ ಇನ್ಸ್ ಪೆಕ್ಟರ್ ಎಲ್ .ವೈ. ರಾಜೇಶ್ ರವರ ಹುಟ್ಟುಹಬ್ಬವನ್ನು ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಉದ್ಯಾನವನದಲ್ಲಿ ಎಲ್. ವೈ. ರಾಜೇಶ್ ರವರ ಅಭಿಮಾನಿಗಳು ಕನ್ನಡ ಸೇನೆ ಜಿಲ್ಲಾ ಘಟಕ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಶ್ರಮದಾನ ಮಾಡಿ ಗಿಡ ನೆಡುವುದರ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು‌.ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ, ನಮ್ಮ ಕೋಲಾರದ ಹುಡುಗ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾದ ಎಲ್. ವೈ. ರಾಜೇಶ್ ರವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಗಿಡ ನೆಡುವ ಕಾರ್ಯಕ್ರಮ, ಅನ್ನದಾನ, ವಿದ್ಯಾದಾನ ಮುಂತಾದ ಸಮಾಜ ಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸುತ್ತಿದ್ದು, ಈ ಬಾರಿ ಧರ್ಮರಾಯ ನಗರದಲ್ಲಿರುವ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಗಿಡಗಂಟೆಗಳು ಬೆಳೆದು ಅವ್ಯವಸ್ಥೆಯಿಂದ ಕೂಡಿದ ಉದ್ಯಾನವನವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿ, ಗಿಡಗಳನ್ನು ನೆಡುವ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು ರಾಜೇಶ್ ರವರ ಸಮಾಜ ಸೇವೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಕೋರಿದರು.ಈ ಸಂದರ್ಭದಲ್ಲಿ ಕನ್ನಡ ಸೇನೆ ಗೌರವ ಅಧ್ಯಕ್ಷ ಪಿ ನಾರಾಯಣಪ್ಪ , ಗೌರವ ಸಲಹೆಗಾರ ವಿ .ಕೆ ರಾಜೇಶ್, ಪತ್ರಕರ್ತ ಚಂದ್ರು, ಮುಖಂಡರಾದ ಗಲ್ ಪೇಟೆ ಸಂತೋಷ್,ಕೊಂಡರಾಜನಹಳ್ಳಿ ಮಂಜುಳ, ಶೇಷಗಿರಿ ನಾಯಕ್, ಎಪಿಎಂಸಿ ಪುಟ್ಟರಾಜು, ರಾಮಾಚಾರಿ, ಅರುಣ್ ಕುಮಾರ್ ಸ್ಕೌಟ್ ಬಾಬು ಸ್ಕೌಟ್,ಮಧು,ಹರೀಶ್, ವಿನಯ್, ಕುಮಾರ್, ಮಲ್ಲಿಕಾರ್ಜುನ ಮತ್ತು ಗೈಡ್ಸ್ ಶಿಬಿರಾರ್ಥಿಗಳು ಶ್ರಮದಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!