ಉದಯವಾಹಿನಿ ಯಾದಗಿರಿ:- ಸರಕಾರ  ಚಿಕ್ಕ ಮಕ್ಕಳು, ಹಿತದೃಷ್ಠಿಯಿಂದ ಮತ್ತುಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎಂದು ಅರಿತುಕೊಂಡು ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಸೇವನೆ ಮಾಡಬೇಕೆಂದು, ಸಾಕಷ್ಟು ಪ್ರಮಾಣದಲ್ಲಿ ಯೋಜನೆಯ ಮುಖಾಂತರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.ಸರಕಾರ ಮಾನವ ಸಂಕುಲಕ್ಕೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರೆ, ಇನ್ನೊಂದು ರೀತಿಯಲ್ಲಿ ಕೆಲವು ಅವಿವೇಕಿಗಳು ಸರಕಾರದ ಯೋಜನೆಗಳನ್ನು ತಮ್ಮ ವಯಕ್ತಿಕ ಲಾಭಗೋಸ್ಕರ ದುರ್ಬಳಕೆ ಮಾಡಿಕೋಳ್ಳುತ್ತಿರುವದು ಹೊಸತೇನಲ್ಲಾ, ಹೌದು ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ಇಲಾಖೆಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ, ಬಾಣಂತಿ ಮಹಿಳೆಯರಿಗೆ ನೀಡಬೇಕಿದ್ದ ಬೇಳೆ ಕಾಳು, ದವಸ ಧಾನ್ಯಗಳನ್ನು ಕಾಳ ಸಂತೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ರಾಜಾರೋಷವಾಗಿ ಮಾರಾಟ ಮಾಡುತ್ತಿರುವದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿದ್ದಿದ್ದರು , ತಿಳಿಯದಂತೆ ಮೌನವಾಗಿತರುವದು ನೋಡಿದರೆ, ಹಿರಿಯ ಅಧಿಕಾರಿಗಳ ಪಾಲೇಷ್ಟು ಎಂದು ಸಾರ್ವಜನಿಕರು ಪ್ರಶ್ನೆ ಹಾಕುತ್ತಿದ್ದಾರೆ, ಇದಕ್ಕೆ ಉತ್ತರಿಸಬೇಕಿದ್ದ ಅಧಿಕಾರಿಗಳು ಇಂಗು ತಿಂದ ಮಂಗನಂತೆ ಸುಮ್ಮನೆ ಇರುವುದು ಪ್ರಗತಿಪರ ಚಿಂತಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮ ಕೇಂದ್ರಗಳಾಗುತ್ತಿವೆ ಅಂಗನವಾಡಿ ?
ಸುರಪುರ ತಾಲೂಕಿನ ಕೆಲವು ಅಂಗನವಾಡಿ ಕೇಂದ್ರದ ಮಕ್ಕಳಿಗೆ, ‌ಮಹಿಳೆಯರಿಗೆ ನೀಡಬೇಕಿದ್ದ ದವಸ , ದಾನ್ಯಗಳು  ಯಥೇಚ್ಛವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯವರನ್ನು ನೋಡಿದರೆ, ಅಂಗನವಾಡಿಗಳು ಅಕ್ರಮ ಕೇಂದ್ರಗಳಾಗಿ ಮಾರ್ಪಾಡು ಮಾಡಲಾಗುತ್ತಿದೆಯೇ ಎಂದು ಜನರು ಸಂಶಯ ವ್ಯಕ್ತಪಡಿಸುತ್ತಾರೆ. ಯಾಕೆಂದರೆ ಸಧ್ಯದ ಶಿಕ್ಷಣವನ್ನು ನೋಡಿದರೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಹಾರದ ಜೊತೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕು, ಆದರೆ ಶಿಕ್ಷಣ ಸಂಸ್ಕಾರವನ್ನು ನೀಡಬೇಕಿದ್ದ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ನೋಡಿದರೆ ಬಹುಶಃ ನಾಚಿಗೇಡಿತನವೇ ಸರಿ.
ಸಿಡಿಪಿಓ ಮಾಡುತ್ತಿರುವದಾರು ಏನು ?
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ  ಅಂಗನವಾಡಿ ಕೇಂದ್ರಗಳಾದರು ಎಷ್ಟಿವೆ, ಎಂದು ಗೋತ್ತಿದೆಯೊ ಇಲ್ಲವೋ ತಿಳಿದಿಲ್ಲಾ, ಯಾಕೆಂದರೆ ಸಾರ್ವಜನಿಕರು ಯಾವುದಾದರೂ ಮಾಹಿತಿಯನ್ನು ಕೇಳಿದರೆ ಹಾರಿಕೆಯ ಉತ್ತರ ನೀಡಿ,ಅಂಗನವಾಡಿ ಮಕ್ಕಳ ಹಾಗೆ ವರ್ತನೆಯನ್ನು ಮಾಡುತ್ತಿರುವದು ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಇಲಾಖೆಯ ಅಕ್ರಮ ನಡೆಯುತ್ತಿದ್ದರು ಸಂಬಂಧ ಇಲ್ಲದಂತೆ  ಜಾಣಕುರುಡತನ ಮೆರೆಯುತ್ತಿದ್ದಾರೆ.
ಸಚಿವರು ಕ್ರಮ ಕೈಗೋಳ್ಳುವರೇ ?
ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅಧಿಕಾರಿಗಳ ಅಂಗೈಯಲ್ಲಿಯೇ ಅಕ್ರಮ ನಡೆಯುತ್ತಿದೆ, ಇದಕ್ಕೆ ಪೂರಕ ಎಂಬಂತೆ ಅನೇಕ ಹೋರಾಟಗಾರರು, ಪ್ರಗತಿಪರ ಚಿಂತಕರು ಅಕ್ರಮದ ಕುರಿತು, ಅಧಿಕಾರಿಗಳಿಗೆ ಮನವಿ ಮುಖಾಂತರ ತಡೆಹಿಡಿಯಲು ಮನವಿಯನ್ನು ಮಾಡಿಕೊಂಡಿದ್ದಾರೆ, ಆದರೂ ಅಕ್ರಮದಲ್ಲಿ ಅಧಿಕಾರಿಗಳ ಪಾಲು ಸಾಕಷ್ಟಿರುವದರಿಂದ  ಮಕ್ಕಳಿಗೆ, ಸಿಗಬೇಕಿದ್ದ ಅಂಗನವಾಡಿ ಆಹಾರ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು, ತಲೆಕೆಡಿಸಿಕೋಳ್ಳುತ್ತಿಲ್ಲಾ,  ಆದರಿಂದ ಅಧಿಕಾರಿಗಳ ಪಾಲು ಈ ಅಕ್ರಮದಲ್ಲಿ ಇರುವುದು ಮನಗಂಡು ಸಂಘಟಿಕರು ಒಂದು ಹೆಜ್ಜೆಯನ್ನು ಮುಂದೆ ಇಟ್ಟು  ಅಕ್ರಮ ತಡಯಲು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಅಕ್ರಮ ತಡೆಹಿಡಿಯಲು ಮನವಿಯನ್ನು ಮಾಡಿಕೊಂಡಿದ್ದಾರೆ.
ಆದರಿಂದ ಮಕ್ಕಳಿಗೆ ಸಿಗಬೇಕಿದ್ದ ಯೋಜನೆಗಳನ್ನು  ಪೋಲು ಮಾಡುತ್ತಿರುವ  ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಇನ್ನೂ ಸಂಭಂದಿಸಿದವರನ್ನು ತನಿಖೆಯನ್ನು ಮಾಡಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೋಳ್ಳಬೇಕಿದೆ ಎಂದು ಜನರ ಒತ್ತಾಶಯವಾಗಿದೆ ಮುಂದಿನ ದಿನಗಳಲ್ಲಿ ಸಚಿವರು ಕ್ರಮ ಕೈಗೋಳ್ಳುತ್ತಾರಾ ಕಾದು ನೋಡಬೇಕು..
ದೂರವಾಣಿ ಕರೆ ಸ್ವೀಕರಿಸದ ಸಿಡಿಪಿಓ : ಸುರಪುರ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಿಗುವಂತಹ ಪೌಷ್ಟಿಕಾಂಶದ ಬೇಳೆಕಾಳುಗಳು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ವಿಷಯವನ್ನು ಜನಸಾಮಾನ್ಯರು ಆರೋಪ ಮಾಡುತ್ತಿರುವುದನ್ನು, ಮಾಹಿತಿ ಕೇಳಲು ಸಿಡಿಪಿಓ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿದರು ಸ್ವೀಕರಿಸಲಿಲ್ಲ,
” ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತೆಯರು ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ಆಹಾರ ಧಾನ್ಯ ನೀಡುತ್ತಾರೋ _ಇಲ್ಲವೋ ಎಂಬುದರ ಕುರಿತು ಪರಿಶೀಲಿಸಿ ಖಚಿತ ಪಡೆದುಕೊಂಡು ನಂತರ ಅಂಗನವಾಡಿಗಳಿಗೆ ಆಹಾರ ಪೋರೈಕೆ ಮಾಡಬೇಕು. “
                     _ಸಾಯಬಣ್ಣ ಎಂಟಮನ್, ಸಾರ್ವಜನಿಕರು ಕೆಂಭಾವಿ
 “ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟರು ಸಂಬಂಧಪಟ್ಟ ಅಧಿಕಾರಿಗಳು ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕು ಒಂದು ವೇಳೆ ನಿರ್ಲಕ್ಷ ಕಂಡಲ್ಲಿ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ “
                             _ಧರ್ಮಣ್ಣ ಚಿಂಚೋಳಿ, ದಲಿತ ಮುಖಂಡರು 

Leave a Reply

Your email address will not be published. Required fields are marked *

error: Content is protected !!