ಉದಯವಾಹಿನಿ ರಾಮನಗರ: ಜಾನಪದ ಲೋಕಕ್ಕೆ ಹೆಚು ವೀಕ್ಷಕರನ್ನು ಸೆಳೆಯಲು ಹೆಚ್ಚು ಪ್ರಚಾರ ಕಾರ್ಯಕ್ಕೆ ಕ್ರಮವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ತಿಳಿಸಿದರು.ಅವರು ಭಾನುವಾರ ಜಾನಪದ ಲೋಕ ವೀಕ್ಷಣೆಗೆ ಮೊದಲು ದಿವಂಗತ ಹೆಚ್.ಎಲ್.ನಾಗೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಜಾನಪದ ಲೋಕವನ್ನು ವೀಕ್ಷಣೆ ಮಾಡಲು ಬರುವ  ಸಂಖ್ಯೆ ಕಡಿಮೆ ಆಗಿರುವುದಿಲ್ಲ. ಅದಕ್ಕಂತಲೇ ಜನರು ಬರುತ್ತಾರೆ.  ಬೆಂಗಳೂರು – ಮೈಸೂರು ಹೆದ್ದಾರಿಯಾದ ನಂತರ ಜಾನಪದ ಲೋಕಕ್ಕೆ ವೀಕ್ಷಣೆಗೆಂದು ಜನರು ಬರುವುದು ಕಡಿಮೆಯಾಗಿಲ್ಲ ಇನ್ನು  ಹೆಚ್ಚು ಪ್ರಚಾರ ಮಾಡಿ ಇನ್ನು ಹೆಚ್ಚಿನ ಜನರನ್ನು ಆಕರ್ಷಿಸಲು  ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಕೊಪ್ಪಳದಲ್ಲಿ ಜಾನಪದ ಲೋಕ ನಿರ್ಮಾಣ ಮಾಡಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಸಿದ್ದಾರೆ. ಆದುದರಿಂದ ಜಾನಪದ ಲೋಕ ವೀಕ್ಷಣೆ ಮಾಡಿ ಇಲ್ಲಿನ ಮಾದರಿಯಲ್ಲಿ  ಹೆಚ್ಚಿನ  ಆಧುನಿಕತೆಯೊಂದಿಗೆ ಕೊಪ್ಪಳದಲ್ಲಿ ಜಾನಪದ ಲೋಕವನ್ನು ನಿರ್ಮಾಣ ಮಾಡಲಾಗುವುದು ಎಂದರು. ಜಾನಪದ ಲೋಕದಲ್ಲಿನ ಮ್ಯೂಸಿಯಂ, ಲೋಕ ಮಾತಾ ಮಂದಿರ, ಲೋಕ ಮಹಲ್, ಲೋಕ ಸಿರಿ, ಗಿರಿಜನ ಲೋಕ ಹೀಗೆ 15 ಎಕರೆಯಲ್ಲಿರುವ ಜಾನಪದ ಲೋಕವನ್ನು ಪೂರ್ಣವಾಗಿ  ವೀಕ್ಷಣೆ ಮಾಡಿ ಅಲ್ಲಿನ ಸಿಬ್ಬಂದಿಯಿಂದ ಜಾನಪದ ಲೋಕದ ಮಾಹಿತಿಯನ್ನು ಪಡೆದರು.
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ :
ಕರ್ನಾಟಕವೆಂದು ನಮ್ಮ ರಾಜ್ಯಕ್ಕೆ ನಾಮಕರಣ ಮಾಡಿ  ನವೆಂಬರ್ 1 ಕ್ಕೆ  50 ವರ್ಷ ಪೂರ್ಣಗೊಳ್ಳಲಿದೆ. ಆದುದರಿಂದ ರಾಜ್ಯಾದ್ಯಂತ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ವೆಂಬ ಕಾರ್ಯಕ್ರಮವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು ಅದರಂತೆ ಒಂದು  ವರ್ಷ ರಾಜ್ಯಾದ್ಯಾಂತ ಈ ಕಾರ್ಯಕ್ರಮವನ್ನು ಏರ್ಪಡಿಲಾಗುವುದು  ಎಂದರು.ಈ ಕಾರ್ಯಕ್ರಮವನ್ನು ಏರ್ಪಡಿಸುವ ಮೊದಲು ರಾಜ್ಯದ ಸಾಹಿತಿಗಳು, ಹೋರಾಟಗಾರರ, ಕಲಾವಿದರ ಅಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೆ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದ ಸಭೆ ಪೂರ್ಣಗೊಂಡಿದ್ದು ನಾಳೆ ಮೈಸೂರು ವಿಭಾಗದ ಸಭೆ ಪೂರ್ಣಗೊಂಡ ನಂತರ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು  ಎಂದರು.
ಈ ಸಂದರ್ಭದಲ್ಲಿ, ಜಾನಪದ ಲೋಕದ ಟ್ರಸ್ಟಿ ಆದಿತ್ಯ ನಂಜರಾಜು, ಸಚಿವರ ಆಪ್ತ ಕಾರ್ಯದರ್ಶಿ ಮಧುಸೂಧನ ರೆಡ್ಡಿ ಹಾಗೂ ಜಾನಪದ ಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!