
ಉದಯವಾಹಿನಿ,ಶಿಡ್ಲಘಟ್ಟ: ತಾಲೂಕಿನಾದ್ಯತ ಮಳೆ ಇಲ್ಲದೆ ಬೆಳೆಗಳು ಈಗಾಗಲೇ ನಷ್ಟವಾಗಿದ್ದು, ಬರಗಾಲ ಎಂಬಂತೆ ಸುಡು ಬಿಸಿಲು ಎಂಬ ಧಗೆಯಲ್ಲಿ ರೈತರು ತಮ್ಮ ಬೆಳೆಗಳಿಗೆ ಮಳೆ ಇಲ್ಲ ಎಂದು ಆಗಸದತ್ತ ನೋಡುತ್ತಿರಬೇಕಾದರೆ ಶನಿವಾರ ದಿಡೀರನೆ ರಬಸದ ಮಳೆಗೆ ಗುಡುಗು ಸಹಿತ ಸಿಡಿಲು ಬಡಿದು ಜೋರಾದ ಮಳೆ ಸುರಿತು. ಈ ಮಹಾ ಮಳೆಗೆ ರೈತರು ನಿಟ್ಟಿಸಿರು ಬಿಟ್ಟು ಸಂತಸ ವ್ಯಕ್ತಪಡಿಸಿದರೆ ಇನ್ನೊಬ್ಬ ರೈತ ತನ್ನ ಜೀವನಕ್ಕಾಗಿ ಸುಮಾರು ಎರಡು ವರ್ಷಗಳಿಂದ ಸಾಕಿದ್ದ ಕುರಿಗಳು ರಾತ್ರಿ ಸಮಯದಲ್ಲಿ ರಬಸದ ಮಳೆಗೆ ಗುಡುಗು ಸಹಿತ “ಸಿಡಿಲು” ಬಡಿದು ಕುರಿಗಳ ಮಾರಣಹೋಮ ಆಗಿದೆ. ಒಂದೊಂದು ಕುರಿಯ ಬೆಲೆ 15 ಸಾವಿರದಿಂದ 17 ಸಾವಿರ ಬೆಲೆಬಾಳುವ ಹತ್ತು ಕುರಿಗಳಲ್ಲಿ ಆರು ಕುರಿಗಳು ಸಾವನಪ್ಪಿವೆ.
ಸುಮಾರು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುತ್ತಿದ್ದ ಕುರಿಗಳು, ಇನ್ನು ಎರಡು ಕುರಿಗಳು ಇನ್ನೇನು ವಾರದ ಒಳಗೆ ಮರಿ ಹಾಕುವ ಸಂಭವವಿತ್ತು ಎತ್ತರಕ್ಕೆ ಬೆಳೆದಿದ್ದ ನಾಲ್ಕು ಟಗರುಗಳು ಸಾವನಪ್ಪಿದೆ.
ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಮಡಗು ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಜಲಾವೃತವಾಗಿವೆ. ಹಲವಾರು ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಸಹ ಆಗಿದೆ. ಗಾಳಿ ಮಳೆಗೆ ವಿದ್ಯುತ್ ತಂತಿಗಳು ಬಿದ್ದಿವೆ.ಸುಮಾರು ದಿನಗಳಿಂದ ಮಳೆ ಇಲ್ಲದ ಕಾರಣ ಬೆಳೆ ಎಲ್ಲಾ ನಷ್ಟ ಆಗಿದೆ, ಜೀವನೋಪಾಯಕ್ಕಾಗಿ ಕುರಿಗಳನ್ನು ಸಾಕುತ್ತಿದ್ದೆವು ಶನಿವಾರ ದಿಢೀರನೆ ಬಿದ್ದ ಜೋರು ಮಳೆ ಹಾಗೂ ಸಿಡಿಲುಗೆ ಸಿಲುಕಿ ಆರು ಕುರಿಗಳು ಸಾವನ್ನಪ್ಪಿವೆ. ಒಂದು ಕಡೆ ಬೆಳೆ ನಷ್ಟವಾದರೆ ಮತ್ತೊಂದು ಕಡೆ ನಮ್ಮ ಕುಟುಂಬ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುರಿಗಳು ಸಾವನ್ನಪ್ಪಿದ್ದರೆ, ಪ್ರಕೃತಿ ಮುನಿಸಿಕೊಂಡು ನಮ್ಮನ್ನು ಮತ್ತಷ್ಟು ಸಂಕಷ್ಟದ ಕೂಪಕ್ಕೆ ತಳ್ಳಿದೆ ಎಂದು ರೈತ ರಾಮಾಂಜಿನಪ್ಪ ತಮ್ಮ ಅಳಲನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.ಇನ್ನು ನೊಂದ ರೈತನ ಮನೆಗೆ ಶಾಸಕ ಬಿಎನ್ ರವಿಕುಮಾರ್ ಅವರ ಸಹೋದರ ಬಿಎನ್ ಸಚ್ಚಿನ್ ಬೇಟಿ ನೀಡಿ ಸಾಂತ್ವಾನ ಹೇಳಿದರು.ಪಶುವೈದ್ಯಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಮಳೆ,ಗುಡುಗು ಹಾಗೂ ಸಿಡಿಲಿಗೆ ಸಿಕ್ಕಿ ಆರು ಕುರಿಗಳು ಸಾವನ್ನಪ್ಪಿದ್ದಾವೆ. ರೈತ ಅನುಗ್ರಹ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಯೋಜನೆಯಂತೆ ಒಂದು ಕುರಿಗೆ ಐದು ಸಾವಿರ ರೂಪಾಯಿ ಪರಿಹಾರ ಸಿಗುತ್ತದೆ ಎಂದು ಪಶುವೈದ್ಯಾಧಿಕಾರಿ ತಿಳಿಸಿದರು.
