ಉದಯವಾಹಿನಿ ಬಾಗೇಪಲ್ಲಿ : ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಬಿಟ್ಟಿ ಭಾಗ್ಯಗಳಿಂದ ಸಾರ್ವಜನಿಕರು ಪಡಿತರ ಕಾರ್ಡುಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ,ಸೇರಿದಂತೆ ಇತರೆ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ ಎಂದು ಹೇಳುತ್ತಿದ್ದರೂ ಇನ್ನೂ ಸರ್ವರ್‌ ಸಮಸ್ಯೆ ನೀಗದ ಕಾರಣ ಕಳೆದ 5 ದಿನಗಳಿಂದ ಗ್ರಾಹಕರು ಮಾತ್ರ ದಿನ ನಿತ್ಯ ತಾಲೂಕು ಕಚೇರಿ ಹಾಗೂ ಸೈಬರ್ ಗಳ ಸುತ್ತ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.ಕಾಂಗ್ರೆಸ್ ಪಕ್ಷದ ಬಿಟ್ಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯಲ್ಲಿ ಪಡಿತರ ಚೀಟಿ ವಿತರಣೆ, ಹೆಸರು ಸೇರ್ಪಡೆ ಬದಲಾವಣೆ ಇತ್ಯಾದಿ ಸೇವೆ ನೀಡಲಾಗಿದ್ದು ನಿತ್ಯ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೈಯಲ್ಲಿ ಕಾರ್ಡುಗಳನ್ನು ಹಿಡಿದುಕೊಂಡು ತಾಲೂಕು ಕಚೇರಿ, ಸೈಬರ್‌ ಕೇಂದ್ರ, ಗ್ರಾಮ ಒನ್‌ ಹಾಗೂ ಬಾಬೂಜಿ ಸೇವಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ,ಗ್ರಾಹಕರು ತಿದ್ದು ಪಡಿ ಹಾಗೂ ಸೇರ್ಪಡೆ ಸೇರಿದಂತೆ ಹಲವು ಸಮಸ್ಯಗಳಿಗೆ ಸರ್ವರ್‌ ಇಲ್ಲದೆ ಇಲಾಖೆ ವಿರುದ್ದ ಕಿಡಿಕಾರಿಕೊಂಡು ವಾಪಸ್‌ ಹೋಗುವಂತಾಗಿದೆ. ಸರ್ಕಾರ ಅರ್ಹರು ಗೃಹಲಕ್ಷ್ಮೇ ಯೋಜನೆಯಿಂದ ವಂಚಿತರಾಗಬಾರದೆಂದು ಕಾರ್ಡುಗಳಲ್ಲಿ ತಿದ್ದುಪಡಿಸಿಗೆ ಸೆ 1 ರಿಂದ 10 ರ ವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುತ್ತಿದೆ. ಮತ್ತೊಂದು ಕಡೆ ನೆಟ್ಟಿಗೆ ಸರ್ವರ್‌ ಕಲ್ಪಿಸದೆ ಇರುವುದರಿಂದ ಅನೇಕ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೇ ಯೋಜನೆಗೆ ಅರ್ಜಿ ಸಲ್ಲಿಸಲು ವೃದ್ಧರು ಹಾಗೂ ಮಹಿಳೆಯರು ದಿನಗೂಲಿ ಕಾರ್ಮಿಕರು ಅದರಲ್ಲೂ ಕೆಲವರು ಮಹಿಳೆಯರು ಸಣ್ಣ ಮಕ್ಕಳನ್ನು ಕೊಂಕಳ್ಳಲ್ಲಿ ಎತ್ತಿಕೊಂಡು ದಿನ ನಿತ್ಯ ತಾಲೂಕು ಕಚೇರಿಯಲ್ಲಿ ಹಾಗೂ ಪಟ್ಟಣದ ಖಾಸಗಿ ಸೈಬರ್ ಅಂಗಡಿಗಳಿಗೆ ದಿನ ನಿತ್ಯ ಹಳ್ಳಿಯಿಂದ ಪಟ್ಟಣಗಳಿಗೆ ಜನರು ಗಿರಕಿ ಹೊಡೆಯುವ ದೃಶ್ಯಗಳು ಸಹಜವಾಗಿದೆ,

Leave a Reply

Your email address will not be published. Required fields are marked *

error: Content is protected !!