ಉದಯವಾಹಿನಿ ಬಾಗೇಪಲ್ಲಿ : ಶ್ರೀ ಕೃಷ್ಣ ಜನ್ಮಾಷ್ಟಮಿಯು ಪ್ರತಿವರ್ಷ ಹಲೋ ಕಿಡ್ಸ್ ಎಂಬ ನಮ್ಮ ಶಾಲೆಯಲ್ಲಿ ಒಂದು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು “ಗೋಕುಲಾಷ್ಟಮಿ” ಎಂದು ಕರೆಯುತ್ತಾರೆ. ಕೃಷ್ಣ ಪಕ್ಷದ ಅಷ್ಟಮಿ ದಿನ ಯಾವುದೇ ಬೇದಭಾವ ಎನ್ನದೆ ಎಲ್ಲಾ ಮಕ್ಕಳು ಶ್ರೀ ಕೃಷ್ಣ, ರುಕ್ಮಿಣಿ, ರಾಧೆಯ ಉಡುಪುಗಳನ್ನು ಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎಂದು ಹಲೋ ಕಿಡ್ಸ್ ಮುಖ್ಯಸ್ಥರಾದ ವೈ. ಜಿ. ಕುಶಲ ರವರು ತಿಳಿಸಿದರು. ಹಾಗೆಯೇ ಮಹಾಭಾರತದಲ್ಲಿ ಶ್ರೀ ಕೃಷ್ಣನ ಮಹತ್ವವೇನು? ಹಾಗೆಯೇ ನಮ್ಮ ಕಲೆ ಆಚಾರ ವಿಚಾರಗಳ ಬಗ್ಗೆ ತಿಳಿಸುತ್ತಾ ಶ್ರೀ ಕೃಷ್ಣ ತಲೆಯ ಮೇಲೆ ನವಿಲುಗರಿಗಳನ್ನು ಧರಿಸಿ ಪುಟ್ಟ ಕಂದಮ್ಮಗಳು ಬರುತ್ತಿದ್ದಾರೆ. ಕೈಯಲ್ಲಿ ಕೊಲನ್ನು ಹಿಡಿದು ರಾಧೆ ರುಕ್ಮಣಿಯನ್ನು ಕರೆದು ಬರುತ್ತಿದ್ದರೆ ಸ್ವರ್ಗಕ್ಕೆ ಬಾಗಿಲು ತೆರೆದಂತೆ ಹಾಗೆಯೇ ಅನೇಕ ನೃತ್ಯ, ಹಾಡುಗಾರಿಕೆ, ಭಾಷಣ ಬಗ್ಗೆ ತಿಳಿಸಿದರು. ನಂತರ ಶಾಲೆಯ ಪ್ರಾಂಶುಪಾಲರಾದ ನೂರ್ ಬಾನು ರವರು ಮಾತನಾಡಿ ಮನೆಯ ಹೊರಗಿನಿಂದ ಕೃಷ್ಣನನ್ನು ಪೂಜಿಸಿದ ಕೋಣೆಯ ತನಕ ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳ ಗುರುತು ಮಕ್ಕಳಲ್ಲಿ ಜ್ಞಾನ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿದರೆ ಭಾರತದಲ್ಲಿ ಇಂತಹ ಹಬ್ಬಗಳನ್ನು ಆಚರಿಸುವುದು ನಮ್ಮ ಸಂಪ್ರದಾಯ ನಂತರ ನಡೆ-ನುಡಿ, ಶಿಸ್ತು-ಸಂಯಮ ಹಬ್ಬಗಳ ಮಹತ್ವದ ಬಗ್ಗೆ ಮಕ್ಕಳಿಗೆ ಸಂಸ್ಕಾರ ಕಲಿಸುವುದು ನಮ್ಮ ಶಾಲೆಯ ಉದ್ದೇಶವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ವೈ. ಜಿ. ಕುಶಲ, ಪ್ರಾಂಶುಪಾಲರಾದ ನೂರ್ ಬಾನು, ಶಿಕ್ಷಕರಾದ ಭಾಗ್ಯ, ಕಾವ್ಯ ರೆಡ್ಡಿ, ಹಾಗೂ ಲಕ್ಷ್ಮೀಪತಿ, ಪದ್ಮಾವತಿ, ಆಶ, ಅನು, ಲಕ್ಷ್ಮಿ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
