
ಉದಯವಾಹಿನಿ ಇಂಡಿ: ಅಧ್ಯಕ್ಷರು ಡಾ ಬಾಬಾಸಾಹೇಬ ಅಂಬೇಡ್ಕರ್ ಮೆಮೋರಿಯಲ್ ಕಮೀಟಿ ಇಂಡಿ ಇವರಿಗೆ ಮಂಜೂರಾದ ಜಾಗೆಯನ್ನು ಮರಳಿ ಪಡೆಯಲು ಇಂಡಿ ಉಪ ವಿಭಾಗಾಧಿಕಾರಿಗಳ ಹುಕುಂ ನಂ – CTS/CR/47/99- 200) ಪ್ರಕಾರ ಅಧ್ಯಕ್ಷರು ಡಾ|| ಬಾಬಾಸಾಹೇಬ ಅಂಬೇಡ್ಕರ್ ಮೆಮೊರಿಯಬಲ್ ಕಮೀಟಿ ಇಂಡಿ ಇವರಿಗೆ 20 40=800 ಚದರ ಅಡಿ ಜಾಗವನ್ನು ಮಂಜೂರು ಮಾಡಿರುತ್ತೀರಿ. ಈ ಜಾಗವನ್ನು ಪಡೆದುಕೊಳ್ಳುವ ಸಮಯದಲ್ಲಿ ಉಪ ವಿಭಾಗಾಧಿಕಾರಿಗಳು ಇಂಡಿ ಇವರ ಕೆಲ ಶರತ್ತುಗಳಿಗೆ ಒಪ್ಪಿಕೊಂಡು ಮುಚ್ಚಳಿಕೆ ಬರೆದುಕೊಟ್ಟು ಸದರಿ ಕಮೀಟಿಯವರು ಪಡೆದುಕೊಂಡಿರುತ್ತಾರೆ.ಸದರಿ ಜಾಗೆಯನ್ನು ಮಂಜೂರು ಮಾಡುವ ಸಮಯದಲ್ಲಿ ಮಚ್ಚಳಿಕೆಯಲ್ಲಿ ಶರತ್ತು ಬರೆದುಕೊಟ್ಟ ಪ್ರಕಾರ ಈ ಆಸ್ತಿಯು ಸ್ಥಳಿಯ ಸಂಸ್ಥೆಯ ನೇಮಕ್ಕನುಗುಣವಾಗಿ ಮಂಜೂರು ಮಾಡಲಾಗಿದ್ದು ಮಂಜೂರಾದ ಎರಡು ವರ್ಷಗಳ ಮುದ್ದತ್ತಿನೊಳಗೆ ಸದರ ಭೂಮಿಯ ಮೇಲೆ ಇಮಾರತಿಯನ್ನು ಕಟ್ಟಿಕೊಳ್ಳುವುದು. ಆಸ್ತಿಯನ್ನು ಪಡೆದುಕೊಂಡವರು ಮಂಜೂರಾದ ಜಾಗೆಯನ್ನು ಬಾಡಿಗೆಯ ರೀತಿಯಿಂದಾಗಲಿ ಅಥವಾ ಯಾವುದೇ ರೀತಿಯಿಂದಾಗಲಿ ಸಂಬಂಧಿಸಿದ ಅಧಿಕಾರಿಗಳಿಂದ ಪೂರ್ವ ಮಂಜೂರು ಪಡೆಯದೆ ಹಸ್ತಾಂತರ ಮಾಡಬಾರದು.
ಯಾವ ಉಪಯೋಗಿಸತಕ್ಕದ್ದು ಯಾವ ಕಾರಣಕ್ಕಾಗಿ ಜಾಗವನ್ನು ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು .ಇ ತೆರನಾಗಿ ಶರತ್ತುಗಳಿಗೆ ಒಳಪಟ್ಟು ಅಧ್ಯಕ್ಷರು ಡಾ|| ಬಾಬಾಸಾಹೇಬ ಅಂಬೇಡ್ಕರ್ ಮೆಮೊರಿಯಬಲ್ ಕಮೀಟಿ ಇಂಡಿ ಇವರು ಜಾಗೆಯನ್ನು ಪಡೆದಿರುತ್ತಾರೆ.ಆದರೆ ಮೇಲೆ ತಿಳಿಸಿದ ಶರತ್ತುಗಳನ್ನು ಮೀರಿ ಈ ಜಾಗೆಯನ್ನು ದಿನಾಂಕ 9-4-2009 ರಂದು ಅಧ್ಯಕ್ಷರು ಡಾ|| ಬಾಬಾಸಾಹೇಬ ಅಂಬೇಡ್ಕರ್ ಮೆಮೊರಿಯಬಲ್ ಕಮೀಟಿ ಇಂಡಿ ಇವರು ಶ್ರೀ ಚಂದ್ರಕಾಂತ ಶಿವಶರಣಪ್ಪ ಕಮರೆಡ್ಡಿ ಎಂಬುವವರಿಗೆ ಆಸ್ತಿಯನ್ನು ಮಾರಿರುತ್ತಾರೆ. ಸದ್ಯ ಈ ಜಾಗೆಯಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಕಟ್ಟಿ ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಮಾಲಿಕರು ಬಳಸುತ್ತಿದ್ದಾರೆ. ಆದ್ದರಿಂದ ಸದರಿ ಜಾಗೆಯನ್ನು ಪಡೆದುಕೊಳ್ಳುವ ಸಂಧರ್ಭದಲ್ಲಿ ಶರತ್ತುಗಳನ್ನು ಮೀರಿ ಸಮುದಾಯದ ಅಭಿವೃದ್ಧಿಗೆ ಮೀಸಲು ಕೊಟ್ಟ ಜಾಗವನ್ನು ಕಮೀಟಿ ಅಧ್ಯಕ್ಷರು ಮತ್ತು ಇತರರು ಸೇರಿ ಮಾರಿಕೊಂಡಿರುತ್ತಾರೆ. ಆದ ಕಾರಣ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಂಡು ಈ ಜಾಗೆಯನ್ನು ವಾಪಸ್ ಪಡೆದು ಸಮುದಾಯದ ಏಳೆಗೆ ಅನುಕೂಲವಾಗುವಂತೆ ಮರಳಿ ನೀಡಬೇಕೆಂದು ನಾಗೇಶ್, ಶಿವಶರಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಉಸ್ತುವಾರಿ ಇಂಡಿ ವಿಧಾನಸಭಾ ಮತಕ್ಷೇತ್ರ ಮನವಿ ಮಾಡಿಕೊಂಡಿದ್ದಾರೆ.
