
ಉದಯವಾಹಿನಿ ಕೊಲ್ಹಾರ : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ,ಕಲೋತ್ಸವಗಳನ್ನು ಪ್ರಾರಂಭಿಸಲಾಗಿದೆ ಎ0ದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತರಾಠೋಡ ಹೇಳಿದರು.ತಾಲೂಕಿನ ಮಸೂತಿಗ್ರಾಮದ ಶ್ರೀ ಗುರು ಸಂಗನ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜರುಗಿದತೆಲಗಿಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾಕಾರಂಜಿ ಮತ್ತುಕಲೋತ್ಸವಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು,ಪ್ರತಿಯೊಂದು ಮಗುವಿನಲ್ಲಿಒಂದಲ್ಲಒಂದು ಪ್ರತಿಭೆಅಡಗಿರುತ್ತದೆಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಭಾಕಾರಂಜಿಯಉದ್ದೇಶವಾಗಿದೆಎ0ದರು. ಅಮೃತಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಸಂತೋಷಗಣಾಚಾರಿ ಮಾತನಾಡಿ,ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ನಾವು ಸದಾ ಬದ್ದರಾಗಿದ್ದುಗ್ರಾಮ ಪಂಚಾಯಿತಿ ವತಿಯಿಂದಅಗತ್ಯ ಸಹಕಾರ ನೀಡುತ್ತೆವೆಎಂದರು. ತೆಲಗಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆನಂದ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ತೀರ್ಪುಗಾರರಿಗೆ ಮಾಹಿತಿ ನೀಡಿದರು.ಪ್ರತಿಭಾಕಾರಂಜಿ ಹಾಗೂ ಕಲೋತ್ಸವಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಸಿ ಪಿ ಪಾಟೀಲ,ಸಂಗನಬಸವ ಪ್ರಾಥಮಿಕ ಶಾಲೆಯಅಧ್ಯಕ್ಷ ಬಿ ಕೆ ಸಾಲಹಳ್ಳಿ,ಉಪಾಧ್ಯಕ್ಷ ಬಿ ಎಂ ಪೋಳ,ಮಸೂತಿ ಅಮೃತಗ್ರಾಮ ಪಂಚಾಯಿತಿಅಧ್ಯಕ್ಷ ಅಶೋಕ ಮಾದರ,ಅಭಿವೃದ್ಧಿಅಧಿಕಾರಿ ಐ ಜಿ ಹೊಸಮಠ, ಕೊಲ್ಹಾರ ವಲಯ ಬಿ ಆರ್ ಪಿ ಪ್ರಮೋದ ಮೆಂಚ,ಗೊಳಸAಗಿ ಸಮೂಹ ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ಕುಂದರಗಿ,ಗ್ರಾಮ ಪಂಚಾಯಿತಿ ಸದಸ್ಯಯಮನೂರಿ ತಳವಾರ, ಶಿಕ್ಷಕರಾದ ವಾಯ್ ಕೆ ಪತ್ತಾರ,ಎಚ್‌ಆರ್‌ರಾಠೋಡ, ಸಿ ಎ ಗೂಗಿಹಾಳ,ದಾನು ನಾಯಕ.ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳು ಸೇರಿದಂತೆಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಜಗದೀಶ ಸಾಲಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.
