ಉದಯವಾಹಿನಿ ಬಾಗೇಪಲ್ಲಿ: ಗಣೇಶ ಹಬ್ಬದ ಹೆಸರಿನಲ್ಲಿ ಬಲವಂತವಾಗಿ ಹಣವನ್ನು ವಸೂಲಿ ಮಾಡುವವರ ಹಾಗೂ ಶಾಂತಿ ಸೌಹಾರ್ದತೆ ಕೆದಡುವ ಪ್ರಯತ್ನ ಮಾಡುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಖಡಕ್ ಎಚ್ಚರಿಕೆ ನೀಡಿದರು.
ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿಯಲ್ಲಿ ಮಾತನಾಡಿದ ಅವರು ಸೆ.17 ಮತ್ತು 18ರಂದು ನಡೆಯಲಿರುವ ಗೌರಿ ಗಣೇಶ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಣೆ ಮಾಡಿ ಆದರೆ ಯಾವುದೇ ಕಾರಣಕ್ಕೂ ಗಣೇಶ ಹಬ್ಬದ ಹೆಸರಿನಲ್ಲಿ ಬಲವಂತವಾಗಿ ಹಣ ವಸೂಲಿಗೆ ಇಳಿಯುವರ ಹಾಗೂ ಪಟ್ಟಣದಲ್ಲಿ ವಿನಾ ಕಾರಣ ಕೋಮುಗಲಭೆ ಸೃಷ್ಠಿಸಿ ಶಾಂತಿ ಸೌಹಾರ್ದತೆಯನ್ನು ಕೆದಡುವಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದರು.
ಗಣೇಶ ಹಬ್ಬದ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕಡ್ಡಾಯವಾಗಿ ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪಡೆಯಬೇಕು, ಗಣಪತಿ ಪ್ರತಿಷ್ಠಾಪನೆಯ ಸಂಪೂರ್ಣ ಜವಾಬ್ದಾರಿ ಅವರದ್ದೆ ಆಗಿರುತ್ತೆ. ಈ ಸಂದರ್ಭದಲ್ಲಿ ಗಲಾಟೆಗೆ ಅವಕಾಶವನ್ನು ನೀಡಬೇಡಿ, ಹಳೇ ದ್ವೇಷದಿಂದ ಗಲಾಟಗೆ ಪ್ರಯತ್ನ ಮಾಡಿದರೆ ಅಂತಹವರ ವಿರುದ್ದ ಕ್ರಮಕೈಗೊಳ್ಳಲಾಗುತ್ತೆ ಎಂದರು.
ಈ ಭಾಗದಲ್ಲಿ ಇದುವರೆವಿಗೂ ಯಾವುದೇ ಕೋಮುಗಲಭೆ ಪ್ರಕರಣಗಳು ಇಲ್ಲ, ಇಲ್ಲಿನ ಎಲ್ಲಾ ಸಮುದಾಯದವರು ಎಲ್ಲಾ ಧರ್ಮಗಳ ಹಬ್ಬಗಳನ್ನು ಶಾಂತಿಯುತವಾಗಿ ಒಟ್ಟಿಗೆ ಆಚರಣೆ ಮಾಡಿಕೊಂಡು ಬರುತ್ತಿರುವುದು ಸಂತೋಷದ ವಿಚಾರವಾಗಿದೆ. ಇಲ್ಲಿನ ಈ ಸಂಪ್ರಧಾಯವನ್ನು ಹೀಗೆ ಮುಂದುವರೆಸುವಂತೆ ಎಲ್ಲಾ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.
ಸಂಜೆ 5 ಗಂಟೆ ಒಳಗೆ ಗಣೇಶ ವಿಸರ್ಜನೆ ಮಾಡಬೇಕು, ರಾತ್ರಿ ಸಮಯದಲ್ಲಿ ವಿಸರ್ಜನೆ ಮಾಡುವುದರಿಂದ ಏನಾದರೂ ಅವಘಾಡಗಳು ನಡೆದರೆ ಕಷ್ಟವಾಗುತ್ತೆ ನೀವು ನಮಗೆ ಸಹಕಾರ ನೀಡಿದರೆ ಪೊಲೀಸರು ನಿಮಗೆ ಸಹಕಾರ ನೀಡಲು ಸಿದ್ದವಾಗಿರುತ್ತೇವೆ ಎಂದ ಅವರು ಪೊಲೀಸ್ ಇಲಾಖೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇದ್ದರೆ ನೇರವಾಗಿ ನನಗೆ ತಿಳಿಸಿ ಎಂದ ಅವರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಂದ ದೂರವಿರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಸಮಾಜ ಘಾತುಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿ ನಿಮ್ಮ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ನಿಮ್ಮ ಸಮಸ್ಯೆಗಳ ಪರಿಹಾರ ಕಲ್ಪಿಸುವಂತಹ ಪ್ರಾಮಾಣ ಕ ಪ್ರಯತ್ನ ಮಾಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಮುಖಂಡರು ಹಾಗೂ ಪೊಲೀಸರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!