
ಉದಯವಾಹಿನಿ ಮಸ್ಕಿ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಖರೀದಿಸಲು ನೀಡುವ ಹಣದಲ್ಲಿ ವ್ಯತ್ಯಾಸ ಮಾಡದಂತೆ ಯಥಾವತ್ತಾಗಿ ನೀಡಬೇಕೆಂದು ಒತ್ತಾಯಿಸಿ ಎಸ್ಎಫ್ಐ ಸಂಘಟನೆ ಮುಖಂಡರು ತಲೆಖಾನ ಗ್ರಾಪಂ ಮುಂಭಾಗ ಪ್ರತಿಭಟಿಸಿದರು. ತಾಲೂಕಿನ ತಲೆಖಾನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ತಾಲೂಕ ಘಟಕ ಅಧ್ಯಕ್ಷ ಬಸವಂತ ಹಿರೇ ಕಡಬೂರು ಅವರು ಮಾತನಾಡಿದರು. ಪಠ್ಯ ಪುಸ್ತಕ ಖರೀದಿಸಲು ಗ್ರಾಪಂ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪಿಯುಸಿ ವಿದ್ಯಾರ್ಥಿಗಳಿಗೆ 1500, ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 2000 ರೂಪಾಯಿ ನೀಡುತ್ತಿದ್ದರು. ಆದರೆ ಈ ಭಾರಿ ಪಠ್ಯಪುಸ್ತಕ ಖರೀದಿಸಲು ಕಡಿಮೆ ಹಣ ನೀಡುತ್ತಿದ್ದು, ಪಿಯುಸಿ ವಿದ್ಯಾರ್ಥಿಗಳಿಗೆ 750 ರೂಪಾಯಿ, ಪದವಿ ವಿದ್ಯಾರ್ಥಿಗಳಿಗೆ 1000ರೂಪಾಯಿ ನೀಡುತ್ತಿದ್ದು, ಪಠ್ಯಪುಸ್ತಕ ಖರೀದಿಸಲು ಹಣ ಸಾಲುವುದಿಲ್ಲ, ಇದರಿಂದ ವಿದ್ಯಾರ್ಥಿಗಳ ಕಲಿಗೆ ಅಡ್ಡಿ ಉಂಟಾಗುತ್ತದೆ, ಪ್ರತಿ ವರ್ಷ ನೀಡಿದ ಹಣವನ್ನು ಈ ಭಾರಿಯು ಶೀಘ್ರವೇ ಒದಗಿಸಬೇಕು ಇಲ್ಲದೇ ಹೋದರೆ ಎಸ್ಎಫ್ಐ ಸಂಘಟನೆ ವತಿಯಿಂದ ಗ್ರಾಪಂ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವೀರೇಶ, ಪರಶುರಾಮ, ಸುದೀಪ, ಮಹೇಶಗೌಡ, ವಿಜಯಕುಮಾರ, ವೆಂಕಟೇಶ, ನಾಗರಾಜ, ಮೌನೇಶ,ಗುಂಡಪ್ಪ ದೇವರಾಜ ಹೊಳೆಯಪ್ಪ ನಾಯಕ ಸೇರಿದಂತೆ ಇನ್ನಿತರಿದ್ದರು
