
ಉದಯವಾಹಿನಿ ಚಿಂತಾಮಣಿ : ಪ್ರತಿ ವರ್ಷದಂತೆ ಈ ವರ್ಷವೂ ನಗರದ ಅಬ್ಬಗುಂಡ ರಸ್ತೆಯ ಮೆಹಬೂಬ್ ನಗರ ಸರ್ಕಲ್ ಮುಂಭಾಗದಲ್ಲಿ ಇರುವ ನಾಗನಾಥೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶನಿಮಹಾತ್ಮ ದೇವಸ್ಥಾನ ಅಂಗಳದಲ್ಲಿ ಸೆಪ್ಟೆಂಬರ್ 9ರ ಶನಿವಾರದಂದು ಮೇಸ್ತ್ರಿ ವೆಂಕಟರಾಯಪ್ಪ ಮತ್ತು ಮುನಿ ನಾರಾಯಣಪ್ಪ ರವರ ಕುಟುಂಬದ ವತಿಯಿಂದ ವಿಶೇಷ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಗ್ರಹಾರ ಗೋವಿಂದ ರವರು ತಿಳಿಸಿದರು. ಸೆಪ್ಟೆಂಬರ್ 9ರ ಶನಿವಾರದಂದು ಬೆಳಗ್ಗೆ 6 ಗಂಟೆಯಿಂದ ವಿಶೇಷ ಪೂಜೆ ಕಾರ್ಯಕ್ರಮ ಇದ್ದು ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿಯವರೆಗೂ ಪ್ರಸಾದ ಹಾಗೂ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ನಂತರ ರಾತ್ರಿ 9:00 ಗಂಟೆಯಿಂದ ಬೆಳಗ್ಗೆ 06 ಗಂಟೆಯವರೆಗೂ ಶನಿಮಹಾತ್ಮನ ಹರಿಕಥೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ವೆಂಕಟೇಶ್, ರಾಮಕೃಷ್ಣಪ್ಪ,ಕುಂಟಿಗಡ್ಡೆ ಲಕ್ಷ್ಮಣ್, ಇದ್ದರು.
