ಉದಯವಾಹಿನಿ ಮುದ್ದೇಬಿಹಾಳ ; ಶ್ರೀ ಕೃಷ್ಣ ಪರಮಾತ್ಮ ನಮಗೆ ಮಾದರಿಯಾಗಬೇಕು ಎಂದು ಶಿಕ್ಷಕ ಮಹಾಂತೇಶ ಸಿದರೆಡ್ಡಿ ಹೇಳಿದರು ಅವರು ಗುರುವಾರ ವಿದ್ಯಾ ಸ್ಪೂರ್ತಿ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಮಾನವೀಯ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕೃಷ್ಣನ ಆದರ್ಶಗಳು ನಮಗೆ ಮಾರ್ಗದರ್ಶನವಾಗಬೇಕು ಶತ್ರುಗಳ ಸಂಹಾರಕ್ಕಾಗಿ ಅವತಾರ ತಾಳಿದ ಕೃಷ್ಣ ಶಿಷ್ಟರನ್ನು ರಕ್ಷಿಸಿದ. ಇಂದಿನ ಸಮಾಜದಲ್ಲಿ ದುಷ್ಟ ಶಕ್ತಿಗಳ ನಿವಾರಣೆಗಾಗಿ ಕೃಷ್ಣನಂತಹವರು ಬರಬೇಕಿದೆ ಎಂದರು ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತ ಅನಿಲ್ ತೇಲಂಗಿ ಮಹಾಭಾರತ ಹಾಗೂ ಭಗವದ್ಗೀತೆ ನೀಡುವ ಸಂದೇಶವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಧರ್ಮವನ್ನುಳಿಸುವಲ್ಲಿ ಕೃಷ್ಣನ ಪಾತ್ರ ಮಹತ್ವದ್ದಾಗಿದೆ. ಅಧರ್ಮವನ್ನು ನಾಶಗೊಳಿಸಲು ಕೃಷ್ಣ ಅವತಾರ ತಾಳಿದ ಕೃಷ್ಣನ ಜೀವನ ದರ್ಶನ ಮಾಡಿಕೊಂಡು ಎಲ್ಲರೂ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು. ಭಗವದ್ಗೀತೆ, ರಾಮಾಯಣಗಳನ್ನು ಅವಹೇಳನ ಮಾಡುವ ಪ್ರವೃತ್ತಿ ಸರಿಯಲ್ಲ. ಧಾರ್ಮಿಕ ಗ್ರಂಥಗಳನ್ನು ಹೊರಗಿನ ಕಣ್ಣುಗಳಿಂದ ನೋಡಬಾರದು, ಅಂತರಂಗದ ಕಣ್ಣುಗಳಿಂದ ನೋಡಬೇಕು ಎಂದು ಸಲಹೆ ನೀಡಿದರು. ಶಿಕ್ಷಕಿ ರೇಖಾ ಸಂಡರಕಿ ಅಂಧಕಾರವನ್ನು ತೊಲಗಿಸಲು ಕೃಷ್ಣ ಮಧ್ಯರಾತ್ರಿ ಜನ್ಮ ತಾಳಿದ. ಅಷ್ಟಮಿ ದಿನ ಜನಿಸುವ ಮೂಲಕ 8 ಮದಗಳಿಂದ ಮಾನವ ದೂರವಿರಬೇಕು ಎಂಬ ಸಂದೇಶ ನೀಡಿದ್ದಾನೆ ಎಂದರು ಕೃಷ್ಣ ರಾಧೆ ಯಶೋಧೆಯ ವೇಷದಲ್ಲಿ ಶಾಲಾ ವಿದ್ಯಾರ್ಥಿಗಳು ಕಂಗೂಳಿಸಿದರು ಕೃಷ್ಣ ನ ಗೀತೆ ನೃತ್ಯ, ಮೋಸರು ಗಡಿಗೆ ಒಡೆದು ಸಂಭ್ರಮಿಸಿದರು ಈ ವೇಳೆ ಪತ್ರಕರ್ತ ಬಸವರಾಜ ಕುಂಬಾರ, ವಿದ್ಯಾ ಸ್ಪೂರ್ತಿ ಶಿಕ್ಷಣ ಸಂಸ್ಥೆಯ ಶಿಕ್ಷಕ ರವಿ ಪತ್ತಾರ,ಶಿಕ್ಷಕಿಯರಾದ ಸೌಮ್ಯ ಬಡಿಗೇರ,ಶೈನಾಜ್ ಶಿರೋಳ,ಮಂಜುಳಾ ಬಿರಾದಾರ, ಭೂಮಿಕಾ ಮುತ್ತಗಿ, ಸೌಮ್ಯ ತುಂಬಗಿ,ಹರ್ಷಿಯಾ ಸಂಕನಾಳ ಮತ್ತಿತರರು ಉಪಸ್ಥಿತರಿದ್ದರು
ವಿದ್ಯಾರ್ಥಿನಿ ಗಂಗಾ ಮುರಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!