ಉದಯವಾಹಿನಿ ಸಿರುಗುಪ್ಪ : ತಾಲೂಕು ಬೆಳೆ ಸಮೀಕ್ಷೆಗಾರರಿಗೆ ವಿವಿಧ ಸೌಲಭಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಶಿರಸ್ತೆದಾರರ ರವೀಂದ್ರಬಾಬು ಅವರ ಮೂಲಕ ಮತ್ತು ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.ತಂಡದ ಮುಖ್ಯಸ್ಥರಾದ ಮಹಾಂತೇಶ್ ಮಾತನಾಡಿ ನಾವು ತಮ್ಮ ಕಛೇರಿಯ ಕಾರ್ಯನಿರತ ಬೆಳೆ ಸಮೀಕ್ಷೆಗಾರರಾಗಿದ್ದು ಸುಮಾರು ೭ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೇವೆ.2೦18ರಲ್ಲಿ ನೀಡುತ್ತಿದ್ದ ಪ್ಲಾಟಿಗೆ 1೦ರೂಗಳನ್ನು ಇಲ್ಲಿಯವರೆಗೆ ಹೆಚ್ಚಿಸಿಲ್ಲ, ಪ್ರತಿ ಪ್ಲಾಟಿಗೆ 5೦ರೂವರೆಗೆ ಹೆಚ್ಚಿಸಬೇಕು. ವರ್ಷದಲ್ಲಿ ನಾಲ್ಕು ಋತುಮಾನಗಳ ಕಾಲ ಸಮೀಕ್ಷೆ ಕೈಗೊಳ್ಳುತ್ತಿರುವ ಪಿ.ಆರ್ ಕೆಲಸಕ್ಕೆ ಮಾಸಿಕವಾಗಿ ವೇತನವನ್ನು ನೀಡುವುದರೊಂದಿಗೆ ಖಾಯಂಗೊಳಿಸಬೇಕು.
ಇಲಾಖೆಯಿಂದ ಗುರುತಿನ ಚೀಟಿ ವಿತರಣೆ, ಸಾಮಾಜಿಕ ಭದ್ರತೆ, ಬೆಳೆ ಸಮೀಕ್ಷೆ ವೇಳೆ ಅವಘಡಗಳು ಸಂಭವಿಸಿದಲ್ಲಿ ಆರೋಗ್ಯಕ್ಕಾಗಿ ವೈದ್ಯಕೀಯ ವೆಚ್ಚ ಭರಿಸುವುದು. ನೂತನ ಆ್ಯಪ್ ತೆಗೆದು ಹಳೇ ಮಾದರಿಯ ಆ್ಯಪ್ ಮುಂದುವರೆಸಬೇಕು. ಬೆಳೆ ಸರ್ವೆ, ಕಾರ್ಯಕ್ಕೆ ಟ್ಯಾಬ್ ಅಥವಾ ಮೊಬೈಲ್ ನೀಡುವುದರೊಂದಿಗೆ ಇಲಾಖೆ ವತಿಯಿಂದ ಕಾಲ ಕಾಲಕ್ಕೆ ತರಬೇತಿ ನೀಡುವಂತೆ ಬೆಳೆ ಸಮೀಕ್ಷೆಗಾರರ ತಂಡದಿAದ ಒತ್ತಾಯಿಸಲಾಯಿತು.
ಇದೇ ವೇಳೆ ತಂಡದವರಾದ ಮಾರುತಿ, ಖಾದರಲಿಂಗ, ಲಕ್ಷಿö್ಮಶ, ರಾಮಾಂಜಿನಿ, ಮಾರುತಿ, ಕೆ.ವೀರೇಶ, ಹುಸೇನಪ್ಪ, ಶ್ರೀಧರ, ಮಂಜುನಾಥ, ಗೋಪಾಲಕೃಷ್ಣ, ವಿರುಪಾಕ್ಷಿ, ಗೋಸ್‌ಕುಮಾರ್, ಮಂಜು, ರಾಮಲಿಂಗಪ್ಪ, ಚೆನ್ನಬಸವನಗೌಡ ಇನ್ನಿತರರು ಇದ್ದರು.
