
ಉದಯವಾಹಿನಿ ದೇವದುರ್ಗ : ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು.ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ತೃಪ್ತಿ ತಂದಿದೆ ಎಂದು ಡಿಎನ್ಎ ಸಂಸ್ಥೆಯ ಕಾರ್ಯದರ್ಶಿ ಎಂ.ಡಿ.ಶರ್ಫುದ್ದೀನ್ ಹೇಳಿದರು.ಪಟ್ಟಣದ ನಗರಗುಂಡ ರಸ್ತೆಯ ಸಂತ ಡಿಎನ್ಎ ಇಖ್ರಾ ಟೆಕ್ನೋ ಶಾಲೆಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು ಜ್ಞಾನ ಎರೆಯುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಾರೆ ಎಂದರು.ಶಿಕ್ಷಕರ ಸಮರ್ಪಣ ಮನೋಭಾವದಿಂದ ಶೈಕ್ಷಣಿಕ ವಾತವರಣ ನಿರ್ಮಾಣವಾಗಿದೆ.ಶಾಲೆ ಜಿಲ್ಲೆಗೆ ಮಾದರಿಯಾಗುವ ನಿಟ್ಟಿನಲ್ಲಿ ಸಹೋದ್ಯೋಗಿಗಳು ಕರ್ತವ್ಯ ನಿರ್ವಹಿಸಲಿ ಎಂದು ಶುಭ ಆರೈಸಿದರು.ಡಾ.ಎಸ್.ರಾಧಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂವಿಧಾನದ ಪೀಠಿಕೆ ಓದಲಾಯಿತು.ಶಾಲೆಯ ಮುಖ್ಯಗುರುಗಳಾದ ಶಬಾನ ಬೇಗಂ,ಶರೀಫ್ ಸಹ ಶಿಕ್ಷಕರಾದ ಸುನೀತಾ ದೇಸಾಯಿ, ಆಪ್ರೀನ್, ಸೆಮಿನಾ ಬೇಗಂ, ಕಲಪೇಶ್, ಕವಿತಾ, ಮಿಜಬ, ಮುಸ್ಕಾನ, ಶಾಇಸ್ತಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
