ಉದಯವಾಹಿನಿ ಅರಸೀಕೆರೆ : ಅರಸೀಕೆರೆ ತಾಲೂಕ್ ಯಾದವ ಸಂಘದ ಆಶ್ರಯದಲ್ಲಿ ಹಾಸನ ರಸ್ತೆಯ ಶ್ರೀ ವಾಲ್ಮೀಕಿ ಸಮುದಾಯ ಭವನದ ಹತ್ತಿರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅರಸೀಕೆರೆಯ ಯಾದವ ಸಮಾಜದ ಭವನ ನಿರ್ಮಿಸಲು ಅರಸೀಕೆರೆ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಕೆಎಂ ಶಿವಲಿಂಗೇಗೌಡರು ದಾನವಾಗಿ ನೀಡಿದ ನಿವೇಶನದಲ್ಲಿ ನಡೆದ ಸಮಾರಂಭದಲ್ಲಿ ಕೊಡಗೈ ದಾನಿಗಳಾದ ಶಾಸಕರನ್ನ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು ಅರಸೀಕೆರೆ ತಾಲೂಕ್ ಯಾದವ ಸಂಘದ ಅಧ್ಯಕ್ಷರಾದ ಶ್ರೀಯುತ ಬೆಂಡೆಕೆರೆ ಅಜ್ಜಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಬಂಡಿಗೌಡ್ ರಾಜಣ್ಣ, ಹಾಸನ ಜಿಲ್ಲಾ ಯಾದವ ಸಂಘದ ಅಧ್ಯಕ್ಷರಾದ ಜಿ ಮಾಲಿಂಗಪ್ಪ ಉಪಾಧ್ಯಕ್ಷರಾದ ಜವನಪ್ಪ, ತಾಲೂಕ್ ಕಾರ್ಯದರ್ಶಿ ಮಲ್ಲಯ್ಯ, ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಜಯ್ ರವರು ಶಾಸಕರನ್ನ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ್ದ ಶಾಸಕ ಶಿವಲಿಂಗೇಗೌಡ ನಾನು ಚುನಾಯಿತನಾಗಿ 15 ವರ್ಷಗಳಿಂದ ಹಿಂದುಳಿದ ದಲಿತ ಶೋಷಿತರ ಪರ ಎಲ್ಲ ಸಮಾಜದ ಬಡವರ ಪರ ಕಾರ್ಯ ನಿರ್ವಹಿಸುತ್ತಿದ್ದು ಯಾದವ ಸಮಾಜಕ್ಕೆ ಯಾದವ ಭವನ ನಿರ್ಮಿಸಲು ನಿವೇಶನವನ್ನು ಕೊಡಿಸಿ ನನ್ನ ಅಧಿಕಾರದ ಅವಧಿಯಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡುತ್ತೇನೆ ಎಂದರು ಎಲ್ಲಾ ಸಮಾಜದ ಬಂಧುಗಳಿಗೆ ತಾಲೂಕಿನಲ್ಲಿ ಈಗಾಗಲೇ ಸಮುದಾಯ ಭವನಗಳನ್ನು ನಿರ್ಮಿಸಿ ಶೋಷಿತ ಸಮಾಜಗಳು ಸಂಘಟಿತರಾಗಿ ತಮ್ಮ ಸಮಾಜದ ಸಮಸ್ಯೆಗಳನ್ನ ಚರ್ಚಿಸಿ ಬಗೆಹರಿಸಿಕೊಳ್ಳಲು ಈ ಸಮುದಾಯ ಭವನಗಳು ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಗೊಲ್ಲರಳ್ಳಿ ಹನುಮಪ್ಪ ಅರ್ಸಿಕೆರೆ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಮುಖಂಡರಾದ ಜಿಬಿ ಶಶಿಧರ್ ಉಪಸ್ಥಿತರಿದ್ದರು.
