
ಉದಯವಾಹಿನಿ ಮುದ್ದೇಬಿಹಾಳ ; ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ರೈತ ಮೋರ್ಚಾ ಹಾಗೂ ಬಿಜೆಪಿ ಹೋರಾಟವನ್ನು ಸೆ 8 ಶುಕ್ರವಾರ ರಾಜ್ಯಾದ್ಯಂತ ಹೋರಾಟ ನಡೆಸಿದೆ ಅದರಂತೆ ಮುದ್ದೇಬಿಹಾಳ ಪಟ್ಟಣದಲ್ಲಿ ಸಹ ಬಿಜೆಪಿ ರೈತ ಮೋರ್ಚಾ ಬಿಜೆಪಿ ಮಂಡಲದಿಂದ ಹೋರಾಟವನ್ನು ಹಮ್ಮಿಕೂಳ್ಳಲಾಗಿತ್ತು ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶಿಲ್ದಾರ ಕಚೇರಿಯ ವರಗೆ ಪ್ರತಿಭಟನಾ ಮೆರವಣಿಗೆ ಮಾಡಿ ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು ಈ ವೇಳೆ ಮಾತನಾಡಿದ ಬಿಜೆಪಿ ಪಕ್ಷದ ಮುಖಂಡರಾದ ಸಿದ್ದರಾಜ ಹೂಳಿ, ಲಕ್ಷ್ಮಣ ಬಿಜ್ಜೂರ , ಮಂಜುನಾಥ ದೂಡಮನಿ ರೈತಪರ ಯೋಜನೆಗಳಾದ ಕಿಸಾನ್ ಸನ್ಮಾನ್, ವಿದ್ಯಾನಿಧಿ, ಶ್ರಮನಿಧಿ ಯೋಜನೆಗಳನ್ನು ರದ್ದು ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೃಷಿಗೆ ಅಗತ್ಯವಿರುವ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಆದರೂ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಇಂತಹ ಸಂಕಷ್ಠ ಪರಿಸ್ಥಿತಿಯಲ್ಲಿ ರೈತಾಪಿಗಳು ಬದುಕುವುದು ಅಸಾಧ್ಯದ ಮಾತಾಗಿದೆ. ಇಂತಹ ಪರಿಸ್ಥಿತಿ ಬರಲು ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯ ರೈತ ಮೋರ್ಚಾ ಹಾಗೂ ಬಿಜೆಪಿ ಒಗ್ಗೂಡಿ ಹೋರಾಟಕ್ಕೆ ಇಳಿದಿದೆ ಬಜೆಟ್ನಲ್ಲಿ ಕೃಷಿ ಇಲಾಖೆಗೆ 10 ಸಾವಿರ ಕೋಟಿ ರೂ ಇಟ್ಟಿದ್ದರು. ಅದರಲ್ಲಿ 5 ಸಾವಿರ ಕೋಟಿ ರೂ ಅನ್ನು ಬೇರೆ ಬೇರೆ ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಬೇರೆ ಬೇರೆ ಸ್ಕೀಂಗಳಿಗೆ ಇಟ್ಟಿದ್ದ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆಯೇ ವಿನಃ, ಗ್ಯಾರಂಟಿಗಾಗಿಯೇ ಇಟ್ಟ ಹಣವನ್ನು ಬಳಸಿಕೊಳ್ಳುತ್ತಿಲ್ಲ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ನಿಲ್ಲಿಸಲಾಗಿದೆ. ಜಿಲ್ಲೆಗೊಂದು ಗೋಶಾಲೆಯನ್ನು ಬಿಜೆಪಿ ಸರ್ಕಾರ ತೆರೆದಿತ್ತು. ಈಗ ಅದನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಸಿಎಂ ಸಿದ್ದರಾಮಯ್ಯ ರೈತ ವಿರೋಧಿಯಾಗಿದ್ದಾರೆ. ನಮ್ಮ ಸರ್ಕಾರ ರೈತರಿಗಾಗಿ ತಂದ ಯೋಜನೆಯನ್ನು ಮರು ಜಾರಿ ಮಾಡಬೇಕೆಂದು ಆಗ್ರಹಿಸಿದರು ಶಿರಸ್ತೆದಾರ ಎಂ ಎ ಬಾಗೇವಾಡಿ ಅವರಿಗೆ ಮನವಿಯನ್ನು ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ ಓದಿ ನೀಡಿದರು ಈ ಸಂದರ್ಭದಲ್ಲಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಶಿವಣಗಿ, ಬಿಜೆಪಿ ಪಕ್ಷದ ಮುಖಂಡರಾದ ಶ್ರೀಶೈಲ್ ದೂಡಮನಿ, ರವೀಂದ್ರ ಬಿರಾದಾರ, ಸೋಮನಗೌಡ ಬಿರಾದಾರ, ಸಂತೋಷ ಬಾದರಬಂಡಿ,ಅಲ್ತಾಫ್ ಬಾಗವಾನ,ಗೌರಮ್ಮ ಹುನಗುಂದ, ಕೃಷ್ಣಾ ಚವ್ಹಾಣ,ಸುಭಾಸ್ ಕಟ್ಟಿಮನಿ,ಪರಶುರಾಮ ನಾಲತವಾಡ,ಸಂಜಯ್ ಬಾಗೇವಾಡಿ, ರಾಯಣ್ಣ ಕುರಿ,ನಾಗರಾಜ ಕಮತರ,ಅರ್ಜುನ ಕುರಿ,ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು
