
ಉದಯವಾಹಿನಿ ಕುಶಾಲನಗರ:- ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ. ಆಲಿಂಕೋ ಸಂಸ್ಥೆ ಮತ್ತು ಬಿ ಆರ್ ಸಿ ಕೇಂದ್ರ ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ
ವಿರಾಜಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಕಲಚೇತನ
ಮಕ್ಕಳಿಗೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣನವರು 23 ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಎಲ್ಲಾ ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭ 7 ಮಕ್ಕಳಿಗೆ ವೀಲ್ ಚೇರ್. 13 ಮಕ್ಕಳಿಗೆ ಎಂ.ಆರ್ ಕಿಟ್. ಒಂದು ಮಗುವಿಗೆ ಬ್ರೈಲ್ ಕ್ಯಾನ್ ಮತ್ತು ಇನ್ನೊಂದು ಮಗುವಿಗೆ
ಕ್ಲಚ್ಚಸ್ ವಿತರಣೆ ಮಾಡಲಾಯಿತು. ಈ ಸಂದರ್ಭ ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್. ಮಂಗಳೂರು ಬಿ ಎಡ್ ಕಾಲೇಜಿನ ಉಪನ್ಯಾಸಕ ಶಿವಾನಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಾಲ್ ಕುಮಾರ್ ಅರುಣ್ ಡಿಸೋಜ ಬಿಐ ಆರ್‌ಟಿಗಳಾದ ಅಜಿತ ಕೇಶವಮೂರ್ತಿ ಬಿ ಆರ್ ಪಿಗಳಾದ ವಾಮನ ಗೀತಾಂಜಲಿ ಪುಷ್ಪ ಮತ್ತು ಎಲ್ಲಾ ಸಿಆರ್ಪಿಗಳು ಪೋಷಕ ವರ್ಗದವರು ಹಾಜರಿದ್ದರು
