
ಉದಯವಾಹಿನಿ ಕೋಲಾರ : ವಿಶ್ವ ಸಾಕ್ಷರತಾ ದಿನಾಚರಣೆ ಹಾಗೂ ಮಿಷನ್ ಇಂದ್ರ ಧನುಷ್ ಕಾರ್ಯಕ್ರಮವನ್ನು ತಾಲೂಕಿನ ಬೆಳಮಾರನಹಳ್ಳಿ ವ್ಯಾಪ್ತಿಯ ಚಾಕಾರಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಗಮಿಸಿದ್ದ ಪ್ರೇಮ ರವರು ಮಾತನಾಡುತ್ತಾ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಮಕ್ಕಳ ಮನಸ್ಥಿತಿ ಹೇಗಿರುತ್ತದೆ ಮತ್ತು ಕಲಿಕೆಯಲ್ಲಿ ಹೇಗೆ ಹಿಂದುಳಿಯುತ್ತಾರೆ ಇದರಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳ ಕುರಿತು ಪೋಷಕರಿಗೆ ಕಿವಿಮಾತು ಹೇಳಿದರು ಹಾಗೆಯೇ ಗರ್ಭಿಣಿ ಸ್ತ್ರೀಯರು ತಮ್ಮ ಗರ್ಭಾವಸ್ತೆಯ ಕಾಲದಲ್ಲಿ ನಿಯಮಿತವಾದಂತ ಚುಚ್ಚುಮದ್ದುಗಳು ಹಾಗೂ ಆರೋಗ್ಯಕ್ಕೆ ಪೂರಕವಾದ ಗುಳಿಗೆಗಳನ್ನು ತೆಗೆದುಕೊಳ್ಳುವ ಕ್ರಮವನ್ನು ತಿಳಿಸಿಕೊಟ್ಟರು. ಮತ್ತು ಸರ್ಕಾರದ ಯೋಜನೆಗಳನ್ನು ಸದುಪ ಯೋಗ ಪಡೆಸಿಕೊಳ್ಳಲು ಕಿವಿಮಾತು ಹೇಳಿದರು.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ ಇಂಚರ ನಾರಾಯಣಸ್ವಾಮಿ ರವರು ಮಾತನಾಡುತ್ತಾ ಇಂದು ನಾವು ಮೌಢ್ಯಗಳ ಸುತ್ತು ಸುತ್ತುತ್ತಿರುವುದು ಅವಮಾನಕರ ವಿಷಯ ಇಂತಹ ತಾಂತ್ರಿಕವಾಗಿ ಬೆಳೆದ ಯುಗದಲ್ಲಿ ನಾವು ಮೌಢ್ಯಗಳನ್ನು ಆಚರಿಸುತಿದ್ದೇವೆ ಎಂದರೆ ಅದಕ್ಕೆ ಕಾರಣ ಅನಕ್ಷರತೆ ಆದ್ದರಿಂದ ನಾವುಗಳು ಸಾಕ್ಷರ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು ಜೊತೆಗೆ ಪೂರ್ಣ ಪ್ರಮಾಣದ ಆರೋಗ್ಯದ ವಿಷಯಗಳನ್ನು ಆಗಿಂದ ಹಾಗೆ ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ ಸಂಪೂರ್ಣ ಸೌಲಭ್ಯಗಳನ್ನು ಪಡೆಯಲು ಕರೆಯಿತ್ತರು.ಈ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಹೇಮಲತಾ, ರಮೇಶ್, ಅತಿಥಿ ಶಿಕ್ಷರಾದ ಅನಿತಾ, ಸಿಂಧೂ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವರಲಕ್ಷ್ಮಮ್ಮ ಮತ್ತು ಚಿತ್ರ ಭಾಗವಹಿಸಿದ್ದರು.
